ಉಡುಪಿ: ಕಾಂತಾರ ಪರ ವಿರೋಧ ಚರ್ಚೆ- ತೇಜೋವಧೆ ಮಾಡಿದವರ ವಿರುದ್ಧ ವಕೀಲೆಯಿಂದ ಎಸ್ಪಿಗೆ ದೂರು

 

ಉಡುಪಿ: ಕಾಂತಾರ ಲೆಜೆಂಡ್ ಚಾಪ್ಟರ್ ನಲ್ಲಿ ಕರಾವಳಿಯ ದೈವಾರಾಧನೆ ನಂಬಿಕೆಯನ್ನು ಅಣಕ ಮಾಡಿ ವಾಣಿಜ್ಯೀಕರಣ ಮಾಡಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ತೇಜೋವಧೆ ಮಾಡುತ್ತಿದ್ದಾರೆ. ತುಳು ಮತ್ತು ಕುಂದಾಪುರ ಕನ್ನಡದ ಭಾಷೆಯ ವಿಚಾರವನ್ನು ಎಳೆದು ತಂದಿದ್ದಾರೆ ಎಂದು ವಾಗ್ಮೀ ವಕೀಲೆ ಸಹನಾ ಕುಂದರ್ ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಹನಾ ಕುಂದರ್ ದೂರು ನೀಡಿದ್ದಾರೆ. ನಾನು ಖಾಸಗಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭ ಕುಂದಾಪುರ ಕನ್ನಡಕ್ಕೆ ಧಕ್ಕೆ ಆಗುವಂತಹ ಯಾವುದೇ ಪದ ಪ್ರಯೋಗಗಳನ್ನು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಳಸಲಾದ ಬರಹಗಳ ದಾಖಲೆಗಳನ್ನು ಎಸ್ಪಿಗೆ ನೀಡಿದ್ದಾರೆ.