ಉಡುಪಿ: ಧರ್ಮಸ್ಥಳದ ಎಸ್ಐಟಿ ತನಿಖೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ವಿ. ಸುನಿಲ್ ಕುಮಾರ್ ,ಅಪಪ್ರಚಾರ ಮಾಡುವವರಿಗೆ ಸರ್ಕಾರ ಪರೋಕ್ಷವಾಗಿ ಮನ್ನಣೆ ಕೊಡುತ್ತಿದೆ. ಈ ಬಗ್ಗೆ ಗುಮಾನಿಗಳು ನಿರ್ಮಾಣವಾಗಿವೆ.ತನಿಖೆಯನ್ನು ಬೇಗ ಮುಗಿಸಿ ಮಧ್ಯಂತರ ವರದಿ ಕೊಡಿ ಎಂದರೂ ಸರ್ಕಾರ ಕೇಳುತ್ತಿಲ್ಲ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸುನಿಲ್ ಕುಮಾರ್ , ಹೇಳಿಕೆಗಳ ಮೂಲಕ ತೀರ್ಮಾನ ಮಾಡಬೇಡಿ.ರಾಜ್ಯದ ಜನರ ಮುಂದೆ ಎಸ್ ಐಟಿ ತನಿಖೆಯ ವರದಿಯನ್ನು ಇಡಿ.ಈಗಲೂ ಅಪಪ್ರಚಾರಗಳು ನಡೆಯುತ್ತಿವೆ. ಅಪಪ್ರಚಾರ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವ ದಿಟ್ಟತನ ತೋರಿಸಿ ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
