ಉಡುಪಿ: ಬಂಧು ಡೇ ಕೇರ್ ಸೆಂಟರ್ ನ ಸುಂದರ ದೀಪಾವಳಿ ಹಣತೆ ಖರೀದಿಸಿ , ಪ್ರೋತ್ಸಾಹಿಸಿ...

 

ಬಂಧು ಡೇ ಕೇರ್ ನಲ್ಲಿ ತಯಾರಾದ ಸುಂದರ ದೀಪಾವಳಿ ಹಣತೆಗಳು

ದೊಡ್ಡಣಗುಡ್ಡೆಯ ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ,ಕೇವಲ ದೈಹಿಕ ಮಾನಸಿಕ ಚಿಕಿತ್ಸೆಯಲ್ಲದೆ ಹತ್ತಾರು ಸಾಮಾಜಿಕ ಕಾರ್ಯವನ್ನೂ ನಡೆಸುತ್ತಿದೆ.ಈ ಸಾಮಾಜಿಕ ಕಾರ್ಯಗಳ ರೂವಾರಿ ,ಡಾ.ಪಿ.ವಿ.ಭಂಡಾರಿ.ಆಸ್ಪತ್ರೆಯ ಸಾಮಾಜಿಕ ಕಾರ್ಯದಡಿ ,ಯಾವುದೇ ಲಾಭವಿಲ್ಲದೆ ನಡೆಯುವ ಸಂಸ್ಥೆ ,ಬಂಧು ಡೇ ಕೇರ್ ಸೆಂಟರ್.ಇಲ್ಲಿ ಜೀವನದ ಯಾವುದೋ ಹಂತದಲ್ಲಿ ಸೋತವರು , ದೈಹಿಕ ಮಾನಸಿಕ ಆರೋಗ್ಯದಿಂದ ನೊಂದವರನ್ನು ಮತ್ತೆ ಬದುಕಿನತ್ತ ಪ್ರೇರೇಪಿಸುವ ಕೆಲಸಗಳು ನಡೆಯುತ್ತಿವೆ.ಇಲ್ಲಿನ ವಾಸಿಗಳು ಪ್ರತೀ ದೀಪಾವಳಿಗೆ ಬಣ್ಣಬಣ್ಣದ ಸುಂದರ ದೀಪದ ಹಣತೆಗಳನ್ನು ತಯಾರಿಸುತ್ತಾರೆ.ಇವು ಲಾಭದಾಯಕ ಏನಲ್ಲ. ಆದರೂ ಇದಕ್ಕೆ ಖರ್ಚುಗಳು ತಗಲುತ್ತವೆ.ಅಂತಹ ಖರ್ಚುಗಳನ್ನು ಸರಿದೂಗಿಸಲು ಈ ಸುಂದರ ಹಣತೆಗಳನ್ನು ಮಾರಾಟ ಮಾಡಲಾಗುತ್ತದೆ. ನೀವೂ ಖರೀದಿ ಮಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಬಹುದು. ಖರೀದಿಸಬಯಸುವವರು 9242821215 ಅಥವಾ 8105360713..ನಂಬರನ್ನು ಸಂಪರ್ಕಿಸಬಹುದು.