ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ದ್ವೇಷ ಭಾಷಣ ವಿರುದ್ಧ ಕ್ರಮಕ್ಕೆ ಒತ್ತಾಯ

ಕಲ್ಲಡ್ಕ ಪ್ರಭಾಕರ್ ಭಟ್


ವಂಗಳೂರು: ದ್ವೇಷ ಭಾಷಣಕಾರರು ದ.ಕ. ಜಿಲ್ಲೆಯಲ್ಲಿ ಮತ್ತೆ ಬಾಯಿ ತೆರೆಯುವ ಪ್ರಯತ್ನ ನಡೆಸಿದ್ದಾರೆ. ಕಲ್ಲಡ್ಕ ಭಟ್ ಮುಸ್ಲಿಮರನ್ನು ಗುರಿಯಾಗಿಸಿ ಮತ್ತೊಂದು ಕೊಳಕು ಭಾಷಣ ಮಾಡಿದ್ದಾರೆ. ಆ ಮೂಲಕ  ಹಿಂದುಗಳನ್ನೂ ಅವಮಾನಿಸುವ, ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಹಿಂದುಗಳು ಹೆಚ್ಚು ಮಕ್ಕಳನ್ನು ಹೆತ್ತು ದೇವರಿಗೆ ಬಿಡುವಂತೆ ಹೇಳಿದ್ದಾರೆ. (ಕಲ್ಲಡ್ಕದವರಿಗೆ ಮಕ್ಕಳೆಷ್ಟು, ಮೊಮ್ಮಕ್ಕಳೆಷ್ಟು ? ಎಂಬ ಮಾಹಿತಿ ಇಲ್ಲ)

Rss ಕರಾವಳಿಗೆ ನೂರು ವರ್ಷದಲ್ಲಿ ನೀಡಿದ ಪ್ರಧಾನ ಕೊಡುಗೆಗಳಲ್ಲಿ ಈ ದ್ವೇಷ ಭಾಷಣಗಳೂ ಒಂದು.

ಪುತ್ತೂರು ಭಾಗದಲ್ಲಿ ನಡೆದಿರುವ ಈ ದ್ವೇಷ ಭಾಷಣದ ಮೇಲೆ‌ ಸರಕಾರ ಸ್ಪಪ್ರೇರಣೆಯಿಂದ ಕಾನೂನು ಕ್ರಮ ಕೈಗೊಳ್ಳುತ್ತದಾ ? ಅಥವಾ ದ್ವೇಷ ಭಾಷಣಗಳ ಮತ್ತೊಂದು ಸರಣಿಗೆ ಗ್ರೀನ್ ಸಿಗ್ನಲ್ ನೀಡುತ್ತದಾ ?

ಕಲ್ಲಡ್ಕ ಭಟ್ರು ಒಂದು ಸ್ಪಷ್ಟೀಕರಣ ನೀಡಬೇಕು. ಹಿಂದುಗಳ ವೋಟು ಜಾಸ್ತಿ ಮಾಡಿ (ಹೆಚ್ಚು‌ ಮಕ್ಕಳನ್ನು ಹುಟ್ಟಿಸಿ) ಯಾರನ್ನು ಗೆಲ್ಲಿಸಬೇಕು ? ಬಿಜೆಪಿಯನ್ನು‌ ಮಾತ್ರವಾ ? ತುಳುನಾಡಿನ ಉಳಿದ 12ಕ್ಷೇತ್ರಗಳಲ್ಲಿ (ಉಳ್ಳಾಲ ಹೊರತು ಪಡಿಸಿ) ಕಾಂಗ್ರೆಸ್ ನ ಹಿಂದು ಅಭ್ಯರ್ಥಿಗಳನ್ನು ಗೆಲ್ಲಿಸಬಹುದಾ ? ಅಥವಾ, ಬಿಜೆಪಿ‌ ಅಭ್ಯರ್ಥಿಗಳು ಮಾತ್ರ ಹಿಂದುಗಳಾ ? ಎಂದು ಡಿವೈಎಫ್ ವೈ ಮುಖಂಡ ಮುನೀರ್ ಕಾಟಿಪಳ್ಳ ಪ್ರಶ್ನೆ ಮಾಡಿದ್ದಾರೆ.