ಉಡುಪಿ: ಎಬಿವಿಪಿ ವಿದ್ಯಾರ್ಥಿಗಳ ಪ್ರಕರಣ ವಜಾಗೊಳಿಸಿದ ಹೈಕೋರ್ಟ್

ಉಡುಪಿ: ಎಬಿವಿಪಿ ವಿದ್ಯಾರ್ಥಿಗಳ ಪ್ರಕರಣ ವಜಾಗೊಳಿಸಿದ ಹೈಕೋರ್ಟ್

 



ಉಡುಪಿ: ವರ್ಷದ ಹಿಂದೆ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕೊಲೆ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನಾ ಜಾಥಾದ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎಬಿವಿಪಿಯ 15 ವಿದ್ಯಾರ್ಥಿ ನಾಯಕರ ಮೇಲೆ ಐಪಿಸಿ ಕಲಂ 143, 147, 341, 290, 149 ರಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಮೊದಲ ಹಂತದಲ್ಲಿ ಉಡುಪಿಯ ನ್ಯಾಯಾಲಯದಲ್ಲಿ ವಕೀಲ ಶ್ರೀನಿಧಿ ಹೆಗ್ಡೆ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಜಾಮೀನನ್ನು ಪಡೆಯಲು ಯಶಸ್ವಿಯಾದರೆ ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ರಿಟ್ ಪೆಟಿಷನ್ ಆಲಿಸಿದ ಎಸ್.ಆರ್ ಕೃಷ್ಣಕುಮಾರ್ ನೇತೃತ್ವದ ಏಕ ಸದಸ್ಯ ಪೀಠ  ವಿದ್ಯಾರ್ಥಿಗಳ ವಿರುದ್ಧ ಇರುವ ಪ್ರಕರಣವನ್ನು ವಜಾಗೊಳಿಸಿ ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನು ಎತ್ತಿ ಹಿಡಿದಿದೆ.

ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯವಾದಿಯಾದ ಅರುಣ್ ಶ್ಯಾಮ್ ರ ಮಾರ್ಗದರ್ಶನದಲ್ಲಿ  ಸುಯೋಗ್ ಇವರು ಮಂಡಿಸಿದ ರಿಟ್ ಪೆಟಿಷನ್ ನಲ್ಲಿ ವಕೀಲರಾದ ಶ್ರೀರಾಮ ಅಂಗೀರಸ, ನಿಶಾಂತ್ ಎಸ್.ಕೆ, ರಿತೀಕ್ ವೈ.ಎಂ, ಜಾಗೃತ್, ಚೈತ್ರ ಶ್ರೀಹರಿ, ರಾಧಿಕಾ, ತುಷಾರ್ ಇವರು ಅಡ್ವೊಕೇಟ್ ಆನ್ ರೆಕಾರ್ಡ್ ಆಗಿದ್ದರು.

Ads on article

Advertise in articles 1

advertising articles 2

Advertise under the article