
ಬ್ರಹ್ಮಾವರ:ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಅಡ್ಡೆ ಮೇಲೆ ಪೊಲೀಸರ ದಾಳಿ- 11 ಮಂದಿ ಬಂಧನ ,ನಗದು ವಶ
04/09/2025 11:57 AM
ಬ್ರಹ್ಮಾವರ: ಹೇರಾಡಿ ಗ್ರಾಮದ ರಶ್ಮಿ ಬಾರ್ & ಲಾಡ್ಜ್ ಕಟ್ಟಡದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ. ವಿಶ್ವನಾಥ ಪೂಜಾರಿ ಭಟ್ಕಳ(43), ಗಣೇಶ್ ಪೂಜಾರಿ(30), ಕೇಶವ(57) ಪ್ರಭಾಕರ ಶೆಟ್ಟಿ(49) ಜಯರಾಜ್(40) ರಾಜು ಪೂಜಾರಿ(59) ರಾಜೀವ್ ಶೆಟ್ಟಿ(49) ರತ್ನಾಕರ(53) ಪ್ರಶಾಂತ್(38) ಹರೀಶ್ ಮೋಗವೀರ(40) ಮತ್ತು ಲೋಹಿತ್ ಕುಪ್ಪಸ್ವಾಮಿ ಭೋವಿ(38) ಬಂಧಿತರು.
ಆರೋಪಿಗಳಿಂದ ರೂ. 21080 ನಗದು ಮತ್ತು ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 181/2025 US 79, 80 KP ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.