ಉಡುಪಿ: ಜನಗಣತಿ ಸಮೀಕ್ಷೆಯ ವೇಳೆ ಜಾತಿ ಕಾಲಂನಲ್ಲಿ "ಬಿಲ್ಲವ" ಎಂದೇ ನಮೂದಿಸಿ: ಬಿಲ್ಲವ ಮುಖಂಡರ ಮನವಿ

ಉಡುಪಿ: ಜನಗಣತಿ ಸಮೀಕ್ಷೆಯ ವೇಳೆ ಜಾತಿ ಕಾಲಂನಲ್ಲಿ "ಬಿಲ್ಲವ" ಎಂದೇ ನಮೂದಿಸಿ: ಬಿಲ್ಲವ ಮುಖಂಡರ ಮನವಿ

 



ಉಡುಪಿ: ಈ ಬಾರಿ ಜನಗಣತಿಯಲ್ಲಿ ಬಿಲ್ಲವ ಸಮುದಾಯದವರು ಜಾತಿ ಎಂಬ ಕಾಲಂನಲ್ಲಿ ಕಡ್ಡಾಯವಾಗಿ "ಬಿಲ್ಲವ" ಎಂದೇ ನಮೂದಿಸಬೇಕು ಎಂದು ಬಿಲ್ಲವ ಮುಖಂಡರು ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬಿಲ್ಲವ ಮುಖಂಡರು, ಸರಕಾರದ ಎಲ್ಲಾ ಮೀಸಲಾತಿ, ಸವಲತ್ತು ಸೌಲಭ್ಯಗಳು ಜನಸಂಖ್ಯೆಯ ಆಧಾರದ ಮೇಲೆಯೇ ನಿರ್ಧಾರ ಆಗುತ್ತದೆ. ತಮ್ಮ ಹೆಸರಿನ ಜೊತೆಗೆ ತಾವು 'ಬಲಿ' ನಮೂದಿಸುವ ಪರಿಪಾಠ ಬೆಳೆಸಿಕೊಂಡಿದ್ದರೂ ಜಾತಿ ಎನ್ನುವ ಕಾಲಂನಲ್ಲಿ "ಬಿಲ್ಲವ” ಎಂಬ ಹೆಸರಿನಿಂದಲೇ ಗುರುತಿಸಿಕೊಳ್ಳಬೇಕು. ಈ ಮೂಲಕ ನಮ್ಮ ಸಮಾಜದ ಸರಿಯಾದ ಜನಸಂಖ್ಯೆಯ ಲೆಕ್ಕ ಸಿಗಬೇಕೆಂದು ವಿನಂತಿಸಿದರು.

ಬಿಲ್ಲವ ಸಮುದಾಯ ಈ ಹಿಂದೆ ನಡೆದ 2011ರ ಜಾತಿಗಣತಿ ಪ್ರಕಟಗೊಂಡ ನಂತರದಲ್ಲಿ ಯಾವುದೇ ವ್ಯವಸ್ಥಿತವಾದ ಜನಗಣತಿ ನಡೆದಿರುವುದಿಲ್ಲ. ಆದ್ದರಿಂದ ಯಾವುದೇ ದಾಖಲೆಗಳಲ್ಲಿ ಜಾತಿಯನ್ನು ಮತ್ತು ಮಾಹಿತಿಯನ್ನು ನಮೂದು ಮಾಡುವ ಸಂದರ್ಭದಲ್ಲಿ ಧರ್ಮ-ಹಿಂದು, ಜಾತಿ-ಬಿಲ್ಲವ, ಉಪಜಾತಿ ಅನ್ವಯಿಸುದಿಲ್ಲ ಹಾಗೂ ಜಾತಿಯ ಇತರ ಸಮಾನಾರ್ಥಕ ಪದ ಅನ್ವಯಿಸುವುದಿಲ್ಲ ಎಂಬಂತೆ ಕಡ್ಡಾಯವಾಗಿ ನಮೂದು ಮಾಡಬೇಕು ಎಂದು ಹೇಳಿದರು.

ಈ ಪ್ರಕ್ರಿಯೆ ಸರಕಾರದಿಂದ ಜಾತಿಗಣತಿಯು ಸುಸಜ್ಜಿತವಾಗಿ ಪೂರ್ಣಗೊಂಡು ಸರಕಾರದ ಇನ್ನಿತರ ಕಾರ್ಯಕ್ರಮಗಳಿಗೆ ಹಾಗೂ ಬಿಲ್ಲವ ಸಮುದಾಯದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರಲು ಅವಕಾಶದೊಂದಿಗೆ ಸಹಕಾರವಾಗುತ್ತದೆ. ಈಗಾಗಲೇ ಬಿಲ್ಲವ ಸಮಾಜವು ಎಲ್ಲಾ ಕ್ಷೇತ್ರಗಳಲ್ಲಿ ಹೊಂದಿಕೊಂಡು ಅನೇಕ ಸಾಧನೆಗಳನ್ನು ಮಾಡಿಕೊಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಯುವ ಬಿಲ್ಲವರಿಗೆ ವಿದ್ಯಾರ್ಜನೆಯಿಂದ ಸಬಲೀಕರಣಗೊಳ್ಳಲು ಈ ಜಾತಿಗಣತಿ ಪೂರಕ ಸಹಕಾರವನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟರು. ಸರಕಾರವು ನಮ್ಮ ಜಾತಿಯೊಂದಿಗೆ "ಬಿಲ್ಲವ ಕ್ರಿಶ್ಚಿಯನ್" ಎಂಬ ಉಲ್ಲೇಖವನ್ನು ಮಾಡಿ ಇನ್ನೊಂದು ಉಪಜಾತಿಯನ್ನು ಮಾಡಿರುವ ಕುರಿತಂತೆ ಬಿಲ್ಲವ ಸಮಾಜದವರು ಸೇರಿ ಈಗಾಗಲೇ ಆಕ್ಷೇಪಣೆಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಬಿಲ್ಲವ ಕ್ರಿಶ್ಚಿಯನ್ ಎಂಬ ಯಾವುದೇ ಜಾತಿ ಇರುವುದಿಲ್ಲ. ಆದ್ದರಿಂದ ನಾವುಗಳು ನಮ್ಮ ಗುರುತನ್ನು ಬಿಲ್ಲವ ಎಂಬುದಾಗಿ ಮಾತ್ರ ಉಪಯೋಗಿಸಬೇಕು ಎಂದು ಮನವಿ‌ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಪ್ರಮಲ್ ಕುಮಾರ್, ಬಿ.ಎನ್ ಶಂಕರ್ ಪೂಜಾರಿ, ಮಹೇಶ್ ಅಂಚನ್, ಮಾಧವ ಪೂಜಾರಿ, ಡಾ. ಸಂತೋಷ್ ಕುಮಾರ್, ಮಂಜುನಾಥ್ ಪೂಜಾರಿ ಮೊದಲಾದವರು ಇದ್ದರು.

Ads on article

Advertise in articles 1

advertising articles 2

Advertise under the article