
ಬೆಂಗಳೂರು: ಬಾಲಕಿ ಸಹಿತ 8 ಮಹಿಳೆಯರ ಮೇಲೆ ಅತ್ಯಾಚಾರ ಆರೋಪ; ಯೋಗ ಗುರು ನಿರಂಜನಾ ಮೂರ್ತಿ ಬಂಧನ
ಬೆಂಗಳೂರು: ಬಾಲಕಿ, ಯುವತಿಯರು ಸೇರಿದಂತೆ ಎಂಟು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದಡಿಯಲ್ಲಿ ಯೋಗಗುರುವೊಬ್ಬನನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಯೋಗ ಗುರು ನಿರಂಜನಾ ಮೂರ್ತಿ ಎಂಬಾತ ಬಂಧಿತ ಆರೋಪಿ. ಈತನ ಸೆಂಟರ್ ಗೆ ಬರುತ್ತಿದ್ದ ಹದಿನೇಳು ವರ್ಷದ ಬಾಲಕಿಯೊಬ್ಬಳು ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರ ನಡೆಸುತ್ತಿದ್ದ ಯೋಗ ಗುರು ನಿರಂಜನಾ ಮೂರ್ತಿ ಎಂಬಾತ ತನ್ನ ಯೋಗ ಸೆಂಟರ್ ಬರುತ್ತಿದ್ದ ಮಹಿಳೆಯರೊಂದಿಗೆ “ನಿಮಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ ಮಾಡುತ್ತೇನೆ. ಅದರಿಂದ ನಿಮಗೆ ಸರ್ಕಾರಿ ಕೆಲಸ ಸಿಗಬಹುದು ಎಂದು ನಂಬಿಸಿ, ಸುಮಾರು ಏಳೆಂಟು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ತನಿಖೆ ವೇಳೆ ಅತ್ಯಾಚಾರ ಎಸಗಿರುವುದು ಬಯಲಾಗಿದೆ.ಆರೋಪಿಯು ಇನ್ನೂ ಹಲವು ಮುಗ್ಧ ಬಾಲಕಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಮಾಹಿತಿ ಇದೆ ಎನ್ನಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.