
ಮಣಿಪಾಲ: ಸ್ಕೂಟಿಯಲ್ಲಿ ಮಾದಕ ವಸ್ತು ಮಾರಾಟ- ಯುವಕ ಬಂಧನ ,ಮಾದಕ ವಸ್ತು ವಶ
15/09/2025 03:04 PM
ಮಣಿಪಾಲ: ಮಣಿಪಾಲದ ವಿದ್ಯಾರತ್ನನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಬಳಿ ಸ್ಕೂಟಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಅರ್ಫಾನ್ (26) ಬಂಧಿತ ಆರೋಪಿ. ಆರೋಪಿಯು ಸ್ಕೂಟಿಯ ಡ್ಯಾಶ್ ಬೋರ್ಡ ನಲ್ಲಿದ್ದ ಬಿಳಿ ಬಣ್ಣದ MDMA 6.61 ಗ್ರಾಂ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರ ಅಂದಾಜು ಮೌಲ್ಯ 13000 ರೂ. ಆಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 165/2025 ಕಲಂ: 8(c) 20(B) 22(B) NDPS ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.