
ಉಡುಪಿ: ವಿಟ್ಲಪಿಂಡಿ ಪ್ರಯುಕ್ತ ಮೂಡೆಹಾಲು, ಅನ್ನಪ್ರಸಾದ ವಿತರಣೆ- ಶಾಸಕ ಯಶ್ ಪಾಲ್ ,ಗೀತಾಂಜಲಿ ಸುವರ್ಣ ಭಾಗಿ
15/09/2025 04:05 PM
ಉಡುಪಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ, ಕಾಲಭೈರವ ದೇವಸ್ಥಾನ, ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ ರಿ. ಶ್ರೀ ದ್ವಾರಕಾಮಾಯಿ ಮಠ ರಿ. ಇದರ ಏಕಜಾತಿ ಧರ್ಮ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ ಗುರೂಜಿ ನೇತೃತ್ವದಲ್ಲಿ ಉಡುಪಿ ವಿಟ್ಲಪಿಂಡಿಯ ಪ್ರಯುಕ್ತ ಮೂಡೆಹಾಲು ಹಾಗೂ ಅನ್ನಪ್ರಸಾದ ವಿತರಣೆಗೆ ಶಾಸಕ ಯಶ್ ಪಾಲ್ ಸುವರ್ಣ ಸೋಮವಾರ ಚಾಲನೆ ನೀಡಿದರು.
ಉಡುಪಿ ಶಾಸಕರ ಕಚೇರಿ ಬಳಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯ ಹರೀಶ್ ಶೆಟ್ಟಿ ಅಂಬಲಪಾಡಿ, ಗಣ್ಯರಾದ ಗೀತಾಂಜಲಿ ಎಂ ಸುವರ್ಣ, ಶ್ರೀಧರ ಅಮೀನ್, ವೀಣಾ ಎಸ್. ಶೆಟ್ಟಿ, ಸತೀಶ್ ದೇವಾಡಿಗ, ರೇಷ್ಮಾ ಎಸ್. ಹೆಗ್ಡೆ ಮಣಿಪಾಲ, ಶಿಲ್ಪಾ ಮಹೇಶ್ ಜತ್ತನ್ನ, ಅಭಿರಾಜ್ ಸುವರ್ಣ, ಪ್ರಭಾತ್ ಕೊಡವೂರು, ಜಯರಾಮ್ ಶೆಟ್ಟಿಗಾರ್, ಮೊದಲಾದವರು ಉಪಸ್ಥಿತರಿದ್ದರು.ಅನ್ನಪ್ರಸಾದ ಮತ್ತು ಮೂಡೆಹಾಲು ಪ್ರಸಾದವನ್ನು ನಗರದ ನೂರಾರು ಜನ ಸ್ವೀಕರಿಸಿದರು.