ತಿಮರೋಡಿ ಮನೆಯಲ್ಲಿ ತಲವಾರು ,ಬಂದೂಕು ಪತ್ತೆ ಪ್ರಕರಣ-  ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲು

ತಿಮರೋಡಿ ಮನೆಯಲ್ಲಿ ತಲವಾರು ,ಬಂದೂಕು ಪತ್ತೆ ಪ್ರಕರಣ- ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲು

 


ಬೆಳ್ತಂಗಡಿ: ಬುರುಡೆ ಚಿನ್ನಯ್ಯನ ಪ್ರಕರಣ ಸಂಬಂಧ ಎಸ್.ಐ.ಟಿ ಅಧಿಕಾರಿಗಳು ನ್ಯಾಯಾಲಯದಿಂದ ವಾರಂಟ್ ಪಡೆದು ಉಜಿರೆಯ ಮಹೇಶ್ ಶೆಟ್ಟಿ ಮನೆಯಲ್ಲಿ ಆ.26ರಂದು ಶೋಧ ಕಾರ್ಯ ನಡೆಸಿದಾಗ ಒಟ್ಟು 44 ವಸ್ತುಗಳನ್ನು ಮಹಜರು ನಡೆಸಿ ವಶಪಡಿಸಿಕೊಳ್ಳಲಾಗಿತ್ತು.

ಈ ವೇಳೆ ಎರಡು ತಲವಾರ್ ಮತ್ತು ಒಂದು ಬಂದೂಕು ಪತ್ತೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಈ ಸಂಬಂಧ ಎಸ್.ಐ.ಟಿ ಎಸ್ಪಿ ಸಿ.ಎ.ಸೈಮನ್ ಅವರು ಸೆ.16 ರಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ತಿಮರೋಡಿ ಮನೆಯಲ್ಲಿ ಅಕ್ರವಾಗಿ ಸಂಗ್ರಹಿಸಿಟ್ಟಿದ್ದ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾದ ಬಗ್ಗೆ ಮುಂದಿನ ತನಿಖೆ ನಡೆಸಲು ಮಹೇಶ್ ಶೆಟ್ಟಿ ವಿರುದ್ಧ ದೂರು ನೀಡಿದ್ದರು.

ಬೆಳ್ತಂಗಡಿ ಪೊಲೀಸ್ ಠಾಣೆಗೆ ಎಸ್.ಐ.ಟಿ ಎಸ್ಪಿ ಸಿ.ಎ.ಸೈಮನ್ ನೀಡಿದ ದೂರಿನ ಮೇರೆಗೆ ARMS ACT 1959(U/S-25(1),25(1-A),24(1-B)(a)) ಮಹೇಶ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article