
ಉಡುಪಿ: 15 ಲಕ್ಷ ರೂ. ಮೌಲ್ಯದ ವಜ್ರ-ಚಿನ್ನಾಭರಣ ಕಳವುಗೈದ ಹೋಂ ನರ್ಸ್ - ಪ್ರಕರಣ ದಾಖಲು
18/09/2025 04:52 AM
ಉಡುಪಿ: ಮಹಿಳೆಯೊಬ್ಬರ ಅನಾರೋಗ್ಯ ಹಿನ್ನೆಲೆಯಲ್ಲಿ ಆರೈಕೆಗೆ ನೇಮಕಕೊಂಡಿದ್ದ ಹೋಂ ನರ್ಸ್ ವೊಬ್ಬರು 15 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜರಕಾಡು ಸಮೀಪ ವಾಸವಿರುವ ನಾಗಮಾಲಿನಿ ಎಂಬುವವರ ಆರೈಕೆಗೆ 2025ರ ಜು. 13 ರಂದು ಜಸಿಂತಾ ಎಂಬವರನ್ನು ಹೋಂ ನರ್ಸ್ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಜಸಿಂತಾ ಅವರು ಜು. 13ರಿಂದ ಜು. 18ರ ಮಧ್ಯಾವಧಿಯಲ್ಲಿ ಪರ್ಸ್ ವೊಂದರಲ್ಲಿಟ್ಟಿದ್ದ 20 ಗ್ರಾಂ. ಮತ್ತು 44 ಗ್ರಾಂ. ತೂಕದ ಒಟ್ಟಾರೆ 15 ಲಕ್ಷ ರೂ. ಮೌಲ್ಯದ ವಜ್ರದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.