
ಉಡುಪಿ: ವೈಕುಂಠ ಬಾಳಿಗ ಕಾನೂನು ಕಾಲೇಜಿನ ವಿದ್ಯಾರ್ಥಿ ಕೌನ್ಸಿಲ್ ನೂತನ ಅಧ್ಯಕ್ಷರಾಗಿ ಎಬಿವಿಪಿ ಬೆಂಬಲಿತ ಅಭ್ಯರ್ಥಿ ಆಯ್ಕೆ
16/09/2025 09:45 AM
ಉಡುಪಿ: ಇಲ್ಲಿನ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಕೌನ್ಸಿಲ್ ಗೆ ನಡೆದ ಚುನಾವಣೆಯಲ್ಲಿ ಒಟ್ಟು 14 ಸ್ಥಾನಗಳ ಪೈಕಿ 13 ರಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗಿದ್ದು, ಅಧ್ಯಕ್ಷನಾಗಿ ಶ್ರೀವತ್ಸ ಗಾಂವ್ಸಕರ್ 8 ಮತಗಳ ಅಂತರಗಳಿಂದ ಪ್ರಚಂಡ ಗೆಲುವು ಸಾಧಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್, ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಹೆಬ್ರಿ ( ಅವಿರೋಧ), ಕಾರ್ಯದರ್ಶಿ ಸ್ವಸ್ತಿಕ್, ನೇಚರ್ಸ್ ಕ್ಲಬ್ ಕಾರ್ಯದರ್ಶಿ ಸಂಹಿತಾ.ಕೆ ಶೃಂಗೇರಿ, ರೆಡ್‌ಕ್ರಾಸ್ ಕಾರ್ಯದರ್ಶಿ ನವೀನ್ ಭಟ್ಕಳ್, ಡಿಬೇಟ್ & ಕ್ವಿಝ್ ಕಾರ್ಯದರ್ಶಿ ಪೂಜಿತ ಹೆಗ್ಗಡೆ, ಚುನಾವಣಾ ಸಾಕ್ಷರತಾ ಕ್ಲಬ್‌ನ ಕಾರ್ಯದರ್ಶಿ ಆ್ಯನ್ಸಿಟ್, ಪ್ಲೇಸ್‌ಮೆಂಟ್ ಸೆಲ್‌ಗೆ ವಿನಯಾ, ಮಾನವಹಕ್ಕುಗಳ ಕ್ಲಬ್‌ಗೆ ನಂದನ್, ಎನ್‌ಎಸ್‌ಎಸ್ ಕಾರ್ಯದರ್ಶಿ ಸಂದೇಶ್ ಹಾಗು ರಕ್ಷಿತಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವಗಂಗಾ, ಮೂಟ್ ಕೋರ್ಟ್ ಸೊಸೈಟಿ ಕಾರ್ಯದರ್ಶಿಯಾಗಿ ಅಪರ್ಣಾ ಲಕ್ಷ್ಮೀ ಶ್ಯಾನುಭಾಗ್ ಆಯ್ಕೆಗೊಂಡಿದ್ದಾರೆ.