
ಕಟಪಾಡಿ: ಬೀದಿ ನಾಯಿಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ - ಪವನ್ ಕುಮಾರ್ ಶಿರ್ವ
18/09/2025 06:35 AM
ಕಟಪಾಡಿ: ಇಲ್ಲಿನ ತ್ರಿಶಾ ಪದವಿ ಕಾಲೇಜಿನಲ್ಲಿ ಬೀದಿ ನಾಯಿಗಳಿಂದ ಸುರಕ್ಷತೆ ಮತ್ತು ರೇಬಿಸ್ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತಾನಾಡಿದ ಅವರು ಬೀದಿ ನಾಯಿಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು..
ಸಂಪನ್ಮೂಲ ವ್ಯಕ್ತಿಯಾಗಿ ಮೂಡಬೆಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿಗಳಾದ ನಿಹಾರಿಕ ಶೆಟ್ಟಿ ಅವರು ಭಾಗವಹಿಸಿ ಮಕ್ಕಳ ಸುರಕ್ಷತೆ ಬಗ್ಗೆ ಮತ್ತು ರೇಬಿಸ್ ನಿಂದ ಯಾವ ರೀತಿ ವೈದ್ಯಕೀಯ ಸೇವೆ ಪಡೆಯಬಹುದೆಂದು ಮಾಹಿತಿ ನೀಡಿದರು.ಈ ಸಂಧರ್ಭದಲ್ಲಿ ಆರೋಗ್ಯ ಅಧಿಕಾರಿಗಳಾದ ಮಮತ,ಪ್ರಭಾಕಲಾ ಹಾಗೂ ಆಶಾ ಕಾರ್ಯಕರ್ತೆ ಯಾದ ಸವಿತ್ರಾ ಮತ್ತು ಗೀತಾ ಉಪಸ್ಥಿತರಿದ್ದರು.ಕಾಲೇಜಿನ ಶಿಕ್ಷಕಿ ಅಕ್ಷಯ ಪೈ ಅವರು ಸ್ವಾಗತಿಸಿ ವಂದಿಸಿದರು.