ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೋಸ;4 ಜನ ಆರೋಪಿಗಳ ಬಂಧನ, 4,00,000 ರೂ.ವಶ

ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೋಸ;4 ಜನ ಆರೋಪಿಗಳ ಬಂಧನ, 4,00,000 ರೂ.ವಶ

 

 


ಉಡುಪಿ: ಆನ್ ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭಾಂಶದ ಅಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ನಾಲ್ವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಜೊಸ್ಸಿ ರವೀಂದ್ರ ಡಿಕ್ರೂಸ್(54) ವಂಚನೆಗೆ ಒಳಗಾದವರು.

ಇವರಿಗೆ ಫೇಸ್ ಬುಕ್ ಮೂಲಕ ಆರೋಹಿ ಅಗರ್ವಾಲ್  ಎಂಬ ಮಹಿಳೆಯ ಪರಿಚಯವಾಗಿದ್ದು 2025ರ ಫೆಬ್ರವರಿ ತಿಂಗಳಲ್ಲಿ ಅವಳ ವಾಟ್ಸಾಪ್ ನಂಬ್ರವನ್ನು ನೀಡಿದ್ದಳು. FXCM Gold Tradingಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಮೆಸೇಜ್  ಮಾಡಿ ನಂಬಿಸಿದ್ದಳು. ಅದನ್ನು ನಂಬಿದ ಜೊಸ್ಸಿ ರವೀಂದ್ರ , ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 75,00,000 ರೂ.  ಹಣವನ್ನು ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಜೊಸ್ಸಿ ರವೀಂದ್ರ ಡಿಕ್ರೂಸ್  ನೀಡಿದ  ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ :  21/2025 ಕಲಂ 66(ಸಿ) 66(ಡಿ) ಐ.ಟಿ. ಆಕ್ಟ್ ಮತ್ತು 318(4) ಬಿಎನ್‌ಎಸ್‌ ಆಕ್ಟ್‌  ಯಂತೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಾದ 1) ಮೊಹಮದ್‌ ಕೈಸ್‌(20), ಅಹಮದ್‌ ಅನ್ವೀಜ್‌(20),  ಸಪ್ವಾನ್‌(30) ಮತ್ತು ತಾಸೀರ್‌(31) ಎಂಬವರನ್ನು ಬಂಧಿಸಿ ಅವರಿಂದ 4,00,000 ರೂ. ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. 

ಈ ಪ್ರಕರಣದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

Advertise under the article