
ಉಡುಪಿ: ಅತಿ ಹೆಚ್ಚು ವಿಮಾ ಪಾಲಿಸಿಗಳ ಮಾರಾಟ ಮಾಡಿ ಗಿನ್ನೆಸ್ ದಾಖಲೆ - ಹಿರಿಯ ಮಹಿಳೆಯ ಸಾಧನೆ
04/09/2025 09:40 AM
ಉಡುಪಿ: 24 ಗಂಟೆಗಳಲ್ಲಿ ಅತೀ ಹೆಚ್ಚಿನ ( 5,88,107 ) ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಹಿರಿಯ ಮಹಿಳೆಯೊಬ್ಬರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ದಾಖಲೆಗೆ ಭಾಜನರಾಗಿದ್ದಾರೆ. ಎಲ್.ಐ.ಸಿ.ಯ ಏಜಂಟರಾದ ಶ್ರೀಮತಿ ಶಾಂತಿ ಜಿ. ಕಿಣಿ ಈ ಸಾಧನೆ ಮಾಡಿದವರು.
ಇಂದು ಉಡುಪಿ ಎಲ್.ಐ.ಸಿ. ವಿಭಾಗದ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಗಣಪತಿ ಎನ್. ಭಟ್ ಅವರು ಶಾಂತಿ ಜಿ. ಕಿಣಿ ಸಹಿತ ಈ ಸಾಧನೆ ಮಾಡಿದವರಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು. ಶಾಂತಿ ಜಿ.ಕಿಣಿಯವರು ಕಳೆದ 51 ವರ್ಷಗಳಿಂದ ಎಲ್ ಐ ಸಿಯ ಸಾಧನೆಯಲ್ಲಿ ಕೈಜೋಡಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.