
ಉಡುಪಿ: ನಾಳೆ (ಸೆ. 5) ಮುಸ್ಲಿಂ ಬಾಂಧವರಿಗೆ ಮಿಲಾದುನ್ನಬಿ - ಜಿಲ್ಲೆಯ ವಿವಿಧೆಡೆ ಶಾಂತಿ ಸಭೆ
04/09/2025 09:11 AM
ಉಡುಪಿ: ಮೌಲಿದ್ ಅಥವಾ ಈದ್ ಮಿಲಾದ್- ಉನ್- ನಬಿ ಮುಸ್ಲಿಮರಿಗೆ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಪ್ರವಾದಿ ಮೊಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವವನ್ನು ನೆನಪಿಸುತ್ತದೆ. ರಬಿ ಉಲ್ ಅವ್ವಾಲ್ ನ 12ನೇ ದಿನದಂದು ಆಚರಿಸಲಾಗುವ ಈ ಹಬ್ಬವನ್ನು ಮುಸ್ಲಿಂ ಬಾಂಧವರು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಬಾರಿ ಈದ್-ಇ-ಮಿಲಾದ್ ಅನ್ನು ಸೆಪ್ಟೆಂಬರ್ 5 ಶುಕ್ರವಾರದಂದು ಆಚರಿಸಲಾಗುತ್ತಿದೆ.
ಈ ಸಂಬಂಧ ಜೆಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಲ್ಲಾ ಮಸೀದಿ ಹಾಗೂ ಮದ್ರಸಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಠಾಣೆಗೆ ಕರೆಯಿಸಿ ಈದ್ ಮಿಲಾದ್ ಪ್ರಯುಕ್ತ ಶಾಂತಿ ಸಭೆ ನಡೆಸಲಾಯಿತು.ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಿಸುವ ಸಮಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕಾಗಿ ತಿಳಿಸಲಾಯಿತು.