
ಉಡುಪಿ: ನೈಜ ಹಿಂದೂಗಳು ಸೌಜನ್ಯ ಪರ ಮತ್ತು ನ್ಯಾಯದ ಪರ ಇದ್ದಾರೆಯೇ ಹೊರತು ಬಿಜೆಪಿ ಜೊತೆಗಿಲ್ಲ- ಕೋಟ ನಾಗೇಂದ್ರ ಪುತ್ರನ್
ಉಡುಪಿ: ವಾಮಾಮಾರ್ಗದ ಮೂಲಕ ಅಧಿಕಾರಕ್ಕೆ ಬರುವುದು ಬಿಜೆಪಿಯವರ ಅಜೆಂಡಾ. ದೇಶಾದ್ಯಂತ ಬಿಜೆಪಿ ಅಧಿಕಾರಕ್ಕೆ ಬಂದ ರಾಜ್ಯಗಳ ಪಟ್ಟಿ ಮಾಡಿದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.
ಹಿಂದುತ್ವದ ವಿಷಯ ಹಿಡಿದು ಧರ್ಮರಕ್ಷಣೆ ಹೆಸರಿನಲ್ಲಿ ಧರ್ಮಸ್ಥಳ ಯಾತ್ರೆ ಹೊರಟಿದ್ದ ಬಿಜೆಪಿಗೆ ಜನ ಬೆಂಬಲ ಸಿಗಲೇ ಇಲ್ಲ.ಇದು ಬಿಜೆಪಿಗೆ ಆದ ಮುಖಭಂಗವಲ್ಲದೆ ಇನ್ನೇನು? ನಿಜವಾದ ಹಿಂದೂಗಳು ನ್ಯಾಯದ ಪರ ಇರುವವರು. ಬಿಜೆಪಿಗೆ ಮಣೆ ಹಾಕದ ನೈಜ ಹಿಂದೂಗಳು, SIT ತನಿಖೆ ಹಾಗೂ ಹಿಂದೂ ಯುವತಿ ಸೌಜನ್ಯ ನ್ಯಾಯದ ಪರ ಇದ್ದಾರೆ ಎಂಬುದು ಜಗಜ್ಜಾಹೀರಾಗಿದೆ.
ನಿಜವಾದ ಹಿಂದೂಗಳು ಯಾರು ಕೂಡ ಈ ಮುಖವಾಡ ಹೊತ್ತ ಬಿಜೆಪಿಯನ್ನು ನಂಬುವುದಿಲ್ಲ ಅನ್ನೋದಕ್ಕೆ ಧರ್ಮಸ್ಥಳ ಧರ್ಮ ಸಂರಕ್ಷಣೆ ಯಾತ್ರೆ ಸಾಕ್ಷಿ ಆಗಿದೆ.
ಇನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಮೊದಲು ಸಾವಿರಾರು ಹೆಣ್ಣು ಮಕ್ಕಳ ಬಲಾತ್ಕಾರ ಮಾಡಿರುವ ಸಹೋದರ ಪ್ರಜ್ವಲ್ ರೇವಣ್ಣನ ವಿರುದ್ಧ ಹಾಸನ ಚಲೋ ಯಾತ್ರೆ ಮಾಡಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕಿತ್ತು.ಆ ಕೆಲಸವನ್ನು ಅವರು ಮಾಡಲೇ ಇಲ್ಲ.
ಇವರ ಧರ್ಮ ಸಂರಕ್ಷಣಾ ಯಾತ್ರೆಯಲ್ಲಿ ಹಿಂದೂ ಧರ್ಮಕ್ಕೆ ಅಪಚಾರ ಮಾಡಿದವರೇ ಹೆಚ್ಚು ಸಂಖ್ಯೆಯಲ್ಲಿ ವೇದಿಕೆಯಲ್ಲಿ ಇದ್ದದ್ದು ಮತ್ತೊಮ್ಮೆ ಹಿಂದೂ ಧರ್ಮಕ್ಕೆ ಬಿಜೆಪಿ, ಹಾಗೂ ಜೆಡಿಎಸ್ ಅನ್ಯಾಯ ಮಾಡಿರುವುದು ಸಾಬೀತಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.