
ಬ್ರಹ್ಮಾವರ:ವಕ್ವಾಡಿ, ಕುಂಭಾಶಿ ಪರಿಸರದಲ್ಲಿ ಕಾಣಿಸಿಕೊಂಡ ಚಿರತೆ - ಅರಣ್ಯ ಇಲಾಖೆ ಕ್ರಮಕೈಗೊಳ್ಳುವಂತೆ ಒತ್ತಾಯ
02/09/2025 10:42 AM
ಬ್ರಹ್ಮಾವರ: ಉಡುಪಿ ಜಿಲ್ಲೆಯ ವಕ್ವಾಡಿ, ಕುಂಭಾಶಿ ಮತ್ತು ಮೂಡುಗೋಪಾಡಿ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರು ಆತಂಕಿತರಾಗಿದ್ದಾರೆ.
ಈ ಭಾಗದಲ್ಲಿರಾತ್ರಿಯಾಗುತ್ತಲೇ ಚಿರತೆ ಸಂಚಾರ ಪ್ರಾರಂಭಗೊಳ್ಳುತ್ತದೆ.ಈ ಪ್ರದೇಶದಲ್ಲಿ ಚಿರತೆ ಓಡಾಡುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಚಿರತೆ ಸೆರೆಯಾಗಿದೆ.ತಡರಾತ್ರಿ ಕುಂಭಾಶಿಯ ಖಾಲಿದ್ ಎಂಬವರ ಗುಜರಿ ಗೋಡೌನ್ ಮುಂಭಾಗದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಗಾಬರಿ ಹುಟ್ಟಿಸಿದೆ.
ಸ್ಥಳೀಯರ ಪ್ರಕಾರ ಚಿರತೆ ಈಗಾಗಲೇ ಹಲವು ನಾಯಿಗಳನ್ನು ಬಲಿ ಪಡೆದಿದೆ.ಮಾತ್ರವಲ್ಲ ಸ್ಥಳೀಯ ಹಸುಗಳ ಮೇಲೆಯೂ ದಾಳಿ ನಡೆಸಿದೆ.ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.