ಉಡುಪಿ: ಡಾ. ಎ ವಿ ಬಾಳಿಗಾ ಆಸ್ಪತ್ರೆಯಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ - ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ

ಉಡುಪಿ: ಡಾ. ಎ ವಿ ಬಾಳಿಗಾ ಆಸ್ಪತ್ರೆಯಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ - ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ

 


ಉಡುಪಿ:  ಡಾ .ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನವನ್ನು ಆಚರಿಸಲಾಯಿತು.ಈ ಪ್ರಯುಕ್ತ ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ ಸಂಯೋಜನೆಯಲ್ಲಿ ಸಮಾಜ ಕಾರ್ಯ ವಿದ್ಯಾರ್ಥಿಗಳಿಗಾಗಿ ಅರ್ಧ ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಡಾ. ವರಲಕ್ಷ್ಮಿ ಚಂದ್ರಶೇಖರನ್  adolescent mental health ಎಂಬ ವಿಚಾರವಾಗಿ ಮೊದಲ ಅವಧಿಯನ್ನು ತೆಗೆದುಕೊಂಡರು. ನಂತರ ಸಭಾ ಕಾರ್ಯಕ್ರಮವು ಜರುಗಿತು. ಸಭೆಯಲ್ಲಿ ಉದ್ಘಾಟಕರಾಗಿ ಡಾ. ಮಧುಮಾಲಾ(ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಸಮಾಜ ಕಾರ್ಯ ವಿಭಾಗ, ಆಳ್ವಾಸ್ ಕಾಲೇಜ್ ,ಮೂಡುಬಿದರೆ) , ಅಧ್ಯಕ್ಷರಾಗಿ ಡಾ. ಪಿ ವಿ ಭಂಡಾರಿ ( ವೈದ್ಯಕೀಯ ನಿರ್ದೇಶಕರು ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ), ಮುಖ್ಯ ಅತಿಥಿಗಳಾಗಿ ಡಾ. ವರಲಕ್ಷ್ಮೀ ಚಂದ್ರಶೇಖರನ್ ( ಅಸೋಸಿಯೇಟ್ ಪ್ರೊಫೆಸರ್ , ಡಿಪಾರ್ಟ್ಮೆಂಟ್ ಆಫ್ ಗ್ಲೋಬಲ್ ಹೆಲ್ತ್ ಆಂಡ್ ಗವರ್ನೆನ್ಸ್, ಕನ್ವೆನರ್ ಇನ್ಸ್ಟಿಟ್ಯೂಷನಲ್ ರಿವ್ಯೂ ಕಮಿಟಿ, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್. MAHE) ಆಸ್ಪತ್ರೆಯ ಮನೋವೈದ್ಯರುಗಳಾದ ಡಾ. ದೀಪಕ್ ಮಲ್ಯ ಹಾಗೂ ಡಾ. ಮಾನಸ್ ಈ.ಆರ್ .ಇವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆ ಆರಂಭದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ಪೂರ್ಣಿಮಾ ಇವರು ನೆರವೇರಿಸಿದರು, ಶ್ರೀಮತಿ ಪದ್ಮ ರಾಘವೇಂದ್ರ ಇವರು ಎಲ್ಲಾ ಗಣ್ಯರನ್ನು ಸಭೆಗೆ ಸ್ವಾಗತಗೈದರು. ಸಭೆಯ ಉದ್ಘಾಟನೆಯ ನಂತರ ಉದ್ಘಾಟಕರು ಹಾಗೂ ಮುಖ್ಯ ಅತಿಥಿಗಳು ಸಭೆಯನ್ನುದ್ದೇಶಿಸಿ ಮಾತನಾಡಿ ಈ ದಿನದ ಧ್ಯೇಯ ಮತ್ತು ಆಶಯಗಳನ್ನ ತಿಳಿಸಿದರು. ಸಭೆಯಲ್ಲಿದ್ದ ಉದ್ಘಾಟಕರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಸಭಾಧ್ಯಕ್ಷರು ನೆನಪಿನ ಕಾಣಿಕೆ ಇತ್ತು ಗೌರವಿಸಿದರು. ಸುರೇಶ್ ಎಸ್ ನಾವೂರು ಇವರು ವಂದನಾರ್ಪಣೆ ಮಾಡಿದರು. ಸಭೆಯ ನಂತರದಲ್ಲಿ ಕಮಲ್ ಏ ಬಾಳಿಗ ಚಾರಿಟಬಲ್ ಟ್ರಸ್ಟ್ ಹಾಗೂ ಡಾ  ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯೂ ಜಂಟಿಯಾಗಿ ನಿರ್ಮಿಸಿದ ಆ ಕ್ಷಣ ಎಂಬ ಕಿರು ಚಿತ್ರವನ್ನು ಡಾ. ವರಲಕ್ಷ್ಮಿ ಚಂದ್ರಶೇಖರನ್ ಇವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಮುಂದಿನ ಅವಧಿಗಳು ಡಾ. ಪಿ ವಿ. ಭಂಡಾರಿ , ಶ್ರೀಮತಿ ಸೌಜನ್ಯ ಶೆಟ್ಟಿ, ಡಾ. ದೀಪಕ್ ಮಲ್ಯ, ಡಾ. ಮಾನಸ ಈ. ಆರ್ ಇವರಿಂದ ಆತ್ಮಹತ್ಯೆ ತಡೆಯ ಕುರಿತು ವಿವಿಧ ಅವಧಿಗಳು ನೀಡಲ್ಪಟ್ಟವು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು,  ಜಿ ಶಂಕರ್ ಗೌರ್ಮೆಂಟ್ ಫಸ್ಟ್ ಗ್ರೇಡ್ ವುಮೆನ್ಸ್ ಕಾಲೇಜ್ ಅಜ್ಜರ ಕಾಡು, ಎಸ್ ಆರ್ ಎಸ್ ಎಮ್ ಎಸ್ ಗೌರ್ಮೆಂಟ್ ಫಸ್ಟ್ ಗ್ರೇಡ್ ಕಾಲೇಜ್ ಬಾರ್ಕೂರು, ಆಳ್ವಾಸ್ ಕಾಲೇಜ್ ಮೂಡುಬಿದರೆ ಇಲ್ಲಿನ ಸಮಾಜ ಕಾರ್ಯ ವಿಭಾಗದ  ಸ್ನಾತಕೋತ್ತರ ಪದವಿಯ 170 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಾಗಾರವು ಸದುದ್ದೇಶದೊಂದಿಗೆ ಸಂಪನ್ನವಾಯಿತು.

Ads on article

Advertise in articles 1

advertising articles 2

Advertise under the article