ಕಾಪು: ಕ್ರೀಡಾಕೂಟದ ಸಂಘಟನಾ ಸಮಿತಿ ರಚನೆ- ಅಧ್ಯಕ್ಷರಾಗಿ ಶಬ್ಬಿ ಅಹ್ಮದ್ ಖಾಝಿ ಕೊಪ್ಪಲಂಗಡಿ ನೇಮಕ

 


ಕಾಪು: ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಉಡುಪಿ ವಲಯ, ಡಿಕೆಎಸ್‌ಸಿ ಅಧೀನ ಸಂಸ್ಥೆಯಾದ ಮೂಳೂರು ಅಲ್ ಇಹ್ಸಾನ್ ಅಕಾಡೆಮಿ ಸ್ಕೂಲ್‌ನ ಸಹಭಾಗಿತ್ವದಲ್ಲಿ ಅ.15 ಮತ್ತು 16ರಂದು ನಡೆಯಲಿರುವ 14/17ರ ವಯೋಮಾನದ ಬಾಲಕ/ಬಾಲಕಿಯರ ಕ್ರೀಡಾಕೂಟದ ಪೂರ್ವ ಸಿದ್ಧತೆಗಾಗಿ ಕ್ರೀಡಾಕೂಟದ ಸಂಘಟನಾ ಸಮಿತಿಯನ್ನು ರಚಿಸಲಾಯಿತು.ಸುಮಾರು 2500 ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ.

ಸಮಿತಿಯ ಅಧ್ಯಕ್ಷರಾಗಿ ಶಬ್ಬಿ ಅಹ್ಮದ್ ಖಾಝಿ ಕೊಪ್ಪಲಂಗಡಿ, ಉಪಾಧ್ಯಕ್ಷರಾಗಿ ಎಸ್‌.ಕೆ.ಇಕ್ಬಾಲ್ ಕಟಪಾಡಿ, ಎಸ್.ಎಂ.ಇಬ್ರಾಹಿಂ ಮಣಿಪಾಲ್, ಸಂಚಾಲಕರಾಗಿ ಮುಸ್ತಾಕ್ ಅಹಮದ್‌ ಕಾಪು, ಸಹ ಸಂಚಾಲಕರಾಗಿ ಅಬ್ದುಲ್ಲ ಸೂಪರ್ ಸ್ಟಾರ್ ಕಾಪು, ಹಣಕಾಸು ಕಾರ್ಯದರ್ಶಿಯಾಗಿ ಅಬೂಬಕ್ಕರ್ ಹಾಜಿ ನೇಜಾರು, ಸದಸ್ಯರಾಗಿ ಅನ್ವರ್ ಹುಸೇನ್ ಗೂಡಿನಬಳಿ, ಎಂ.ಇ. ಮೂಳೂರು, ಹಾತಿಮ್ ಕೂಳೂರು, ಇಕ್ಬಾಲ್ ಕೃಷ್ಣಾಪುರ, ಮನ್ಸೂರು ಕೃಷ್ಣಾಪುರ, ಶರೀಫ್ ಜೋಕಟ್ಟೆ, ವೈಬಿಸಿ ಬಶೀರ್ ಅಲಿ, ಆಸಿಫ್ ಮೂಳೂರು, ಸತೀಶ್‌ ಮೂಳೂರು, ಮನ್ಸೂರ್ ಮೆಕ್ಕಾಸ್, ಅಭಿಮಾನ್ ಹಾಜಬ್ಬ ಮೂಳೂರು ಆಯ್ಕೆಯಾದರು.ಸಭೆಯಲ್ಲಿ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ತಾಲೂಕು ಅಧ್ಯಕ್ಷ ಕಿರಣ್ ಕುಮಾ‌ರ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾಪು ಮತ್ತು ಉಡುಪಿ ತಾಲೂಕಿನ ಕ್ರೀಡಾಧಿಕಾರಿಗಳಾದ ರಿತೇಶ್ ಕುಮಾ‌ರ್ ಶೆಟ್ಟಿ ವಸಂತ ಜೋಗಿ ಮತ್ತು ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖ‌ರ್ ಮುದರಂಗಡಿ ಉಪಸ್ಥಿತರಿದ್ದರು.

ಸಂಸ್ಥೆಯ ಮ್ಯಾನೇಜರ್ ಮೌಲಾನ ಯು.ಕೆ.ಮುಸ್ತಫಾ ಸಅದಿ, ಆಡಳಿತಾಧಿಕಾರಿ ಪ್ರೊ.ಯೂಸುಫ್, ಪ್ರಾಂಶುಪಾಲ ಕೆ.ಎಸ್.ಹಬೀಬ್ ರಹಮಾನ್, ಮುಖ್ಯೋಪಾಧ್ಯಾಯಯಿನಿ ಸೈಯದ್‌ ಶಬಾನ, ದೈಹಿಕ ಶಿಕ್ಷಣ ಶಿಕ್ಷಕರಾದ ಬಶೀ‌ರ್ ಎಂ., ಸದ್ದಾಂ ಹುಸೇನ್ ಮತ್ತು ಸುಮನ ಕಿಶೋರ್ ಹಾಜರಿದ್ದರು.