
ತೋನ್ಸೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ
ಉಡುಪಿ: ತೋನ್ಸೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷ ಡಾಕ್ಟರ್ ಶಹನ್ವಾಜ ಇವರು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ " ವಿದ್ಯಾರ್ಥಿಗಳಿಗೆ ಕೇವಲ ಪಾಠ ವಿಷಯವನ್ನು ವರ್ಗಾಯಿಸುವುರು ಆಗದೇ, ಅವರನ್ನು ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರೋಪಾಯದ ಮಾರ್ಗದರ್ಶನದ ಜೊತೆ ಸಮಾಜದಲ್ಲಿ ಕೂಡಿ ಬಾಳುವ ವ್ಯವಸ್ಥೆಯ ಕುರಿತಾಗಿ ತಿಳಿಸಬೇಕು" ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕಿ ಶ್ರೀಮತಿ ದಯಾವತಿ, ಅರೆಬಿಕ್ ಶಿಕ್ಷಕಿ ರಹಮತುನ್ನಿಸಾ ಹಾಗೂ ಸಾಲಿಹಾತ್ ಶಾಲಾ ಹಿರಿಯ ಸಹ ಶಿಕ್ಷಕಿ ಶ್ರೀಮತಿ ಲವೀನಾ ಕ್ಲಾರಾ ಇವರುಗಳನ್ನು ಸನ್ಮಾನ ಮಾಡಲಾಯಿತು.
ಟ್ರಸ್ಟ್ ನ ಖಜಾಂಚಿ ಜನಾಬ್ ಅಬ್ದುಲ್ ಖಾದರ್ ಇವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಟ್ರಸ್ಟಿ ಹುಸೇನ್ ಮಾಸ್ಟರ್, ಶಾಲಾ ವಿಭಾಗದ ಆಕಾಡೆಮಿ ಮುಖ್ಯಸ್ಥ ಹಸೀಬ್ ತರಫದಾರ್ , ಕಾಲೇಜು ಪ್ರಾಂಶುಪಾಲರಾದ ಡಾ. ಸಬೀನಾ ,ದಿವ್ಯಾ ಪೈ, ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ, ಶಹದಾತ್ ಬೆಂಗ್ರೆ, ಯಾಸ್ಮಿನ್ ಭಾನು, ಅರೆಬಿಕ್ ವಿಭಾಗದ ಮುಖ್ಯಸ್ಥರಾದ ಕುಲಸುಂ ಅಬೂಬಕರ್, ಶಾಹಿದ್ ಮೌಲಾನಾ ಉಪಸ್ತಿತರಿದ್ದರು.
ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ವಿಭಾಗದ ಶಾಹದಾತ್ ಸ್ವಾಗತಿಸಿದರು, ಶಿಕ್ಷಕಿ ತಾಜುನೀಸಾ ಧನ್ಯವಾದ ಹೇಳಿದರು. ಶಿಕ್ಷಕಿ ಮೇರಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.