
ಮಂಗಳೂರು: ಹೆದ್ದಾರಿ ಹೊಂಡಕ್ಕೆ ಬಲಿಯಾದ ಪರ್ಕಳದ ಮಹಿಳೆ- ಹೆದ್ದಾರಿ ಅಧಿಕಾರಿ ,ಲಾರಿ ಚಾಲಕನ ವಿರುದ್ಧ ಪ್ರಕರಣ
10/09/2025 03:04 AM
ಮಂಗಳೂರು: ಕೂಳೂರಿನಲ್ಲಿ ನಿನ್ನೆ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಮೀನು ಲಾರಿ ಚಾಲಕ ಮೊಹಮ್ಮದ್ ಫಾರೂಕ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಮೇಲೆ ಪ್ರಕರಣ ದಾಖಲಾಗಿದೆ. ಈ ಅಪಘಾತಕ್ಕೆ ಹೆದ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದೇ , ರಸ್ತೆಯಲ್ಲಿ ಆಗಿರುವ ರಸ್ತೆಗುಂಡಿಗಳನ್ನು ಮುಚ್ಚದೆ ನಿರ್ಲಕ್ಷ್ಯತನ ವಹಿಸಿರುವುದೇ ಕಾರಣ ಎಂದು ಉಲ್ಲೇಖಿಸಲಾಗಿದೆ. ನಿರ್ಲಕ್ಷ್ಯ ತನದ ಚಾಲನೆಗೆ ಚಾಲಕನನ್ನು ಹೊಣೆ ಮಾಡಲಾಗಿದೆ. ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್‌ಕಲಂ 281, 106(1) ಮತ್ತು ಐಎಂವಿ ಕಾಯ್ದೆ 198(ಎ) ರಂತೆ ಪ್ರಕರಣ ದಾಖಲಾಗಿದೆ.ಮಹಿಳೆಯನ್ನು ಬಲಿ ಪಡೆದ ಮೃತ್ಯು ರೂಪಿ ಹೊಂಡ 2 ತಿಂಗಳಿನಿಂದ ಹಾಗೇ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.