
ಉಡುಪಿ:ಮುಸುಕುದಾರಿ ಕಳ್ಳರಿಂದ ತಡರಾತ್ರಿ ಅಲೆವೂರಿನಲ್ಲಿ ಓಡಾಟ -ಫ್ಲ್ಯಾಟೊಂದರಲ್ಲಿ ಕಳ್ಳತನ
03/09/2025 04:57 AM
ಉಡುಪಿ: ಉಡುಪಿಯಾದ್ಯಂತ ಕಳ್ಳರ ಹಾವಳಿ ಹೆಚ್ಚಿದ್ದು ತಡರಾತ್ರಿ ಅಲೆವೂರು ಬಳಿ ಮೂವರು ಮುಸುಕುದಾರಿ ಕಳ್ಳರ ಚಲನವಲನ ಆತಂಕ ಮೂಡಿಸಿದೆ.ಮೂವರು ಮುಸುಕುದಾರಿ ಕಳ್ಳರು ಕುಕ್ಕಿ ಕಟ್ಟೆ ಭಾಗದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇವರು ಅಲೆವೂರು ಕಲ್ಯಾಣ ನಗರದಲ್ಲಿ ಫ್ಲ್ಯಾಟ್ ಒಂದಕ್ಕೆ ನುಗ್ಗಿರುವ ಮಾಹಿತಿ ಇದೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದ್ದು ಕಳ್ಳರು ಬೇರೆ ಕಡೆಯೂ ಕಳ್ಳತನ ಮಾಡಿರುವ ಸಾಧ್ಯತೆ ಇದೆ.