ಉಡುಪಿ: ಸರಕಾರ ಮತಾಂತರಕ್ಕೆ ಬೆಂಬಲ ನೀಡುತ್ತಿದೆ - ಸಂಸದ ಕೋಟ ಆರೋಪ

ಉಡುಪಿ: ಸರಕಾರ ಮತಾಂತರಕ್ಕೆ ಬೆಂಬಲ ನೀಡುತ್ತಿದೆ - ಸಂಸದ ಕೋಟ ಆರೋಪ

 


ಉಡುಪಿ: ಕಾಂತರಾಜ್ ವರದಿಯನ್ನು ಈ ಸರ್ಕಾರ ತಿರಸ್ಕರಿಸಲೂ ಇಲ್ಲ‌. ಅಂಗೀಕರಿಸಿಯೂ ಇಲ್ಲ.ಇದಕ್ಕಾಗಿ165 ಕೋಟಿ ರೂಪಾಯಿ ಬಿಡುಗಡೆ ಮಾಡಿ ಖರ್ಚಾಗಿದೆ.ಈಗ ಮತ್ತೊಮ್ಮೆ ಹೊಸ ವರದಿಗೆ ಸಿದ್ದರಾಮಯ್ಯ ಸರ್ಕಾರ ಹೊರಟಿದೆ.42 ರಿಂದ 50 ಜಾತಿಯ ಜೊತೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿದ್ದಾರೆ.ಇದರ ಬಗ್ಗೆ ನಮ್ಮ ಕಠಿಣವಾದ ವಿರೋಧ ಇದೆ.

ಲಿಂಗಾಯಿತ ಕ್ರಿಶ್ಚಿಯನ್ ,ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ , ಈಡಿಗ ಕ್ರಿಶ್ಚಿಯನ್ ,ಮಡಿವಾಳ ಕ್ರಿಶ್ಚಿಯನ್‌..ಹೀಗೆ ಜಾತಿಯ ಜೊತೆ ಕ್ರಿಶ್ಚಿಯನ್ ಎಂಬ ಪದ ಬಳಕೆ ಮಾಡಿದ್ದಾರೆ.ಇದರಿಂದ 

ಮತಾಂತರಗೊಳ್ಳಲು ಸರ್ಕಾರ ಸಂಪೂರ್ಣ ಬೆಂಬಲ ನೀಡುವಂತೆ ತೋರುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಮಾದ್ಯಮದ ಜೊತೆ ಮಾತನಾಡಿದ ಅವರು, ಸರಕಾರ ಹಿಂದೂ ಧರ್ಮದ ಸಣ್ಣ ಜಾತಿಗಳನ್ನು ಒಡೆಯಲು ಹೊರಟಿದೆ.ಸಿದ್ದರಾಮಯ್ಯನವರೇ ಈ ಕುರಿತ  ಗೊಂದಲ ನಿವಾರಿಸಿ.

ಸಾಮಾಜಿಕ ಶೈಕ್ಷಣಿಕ ಜನಗಣತಿ ಅಂದ್ರೆ ಜಾತಿಯ ಜೊತೆ ಕ್ರಿಶ್ಚಿಯನ್ ಸೇರಿಸೋದಾ?ಸರಕಾರವೇ ನೇರ ನಿಂತು ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ.ಜಾತಿ ಸೂಚಕದ ಮುಂದೆ ಕ್ರಿಶ್ಚಿಯನ್ ಎಂಬ ಪದ ವಾಪಾಸ್ ಪಡೆಯಿರಿ ಎಂದು ಒತ್ತಾಯ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article