
ಬೆಂಗಳೂರು: ಮಾಜಿ ಸಿಎಂ ಡಿ. ವಿ. ಸದಾನಂದ ಗೌಡ ಬ್ಯಾಂಕ್ ಖಾತೆ ಹ್ಯಾಕ್ - ಸೈಬರ್ ವಂಚಕರಿಂದ 3 ಲಕ್ಷ ರೂ. ವಂಚನೆ
17/09/2025 09:10 AM
ಬೆಂಗಳೂರು: ಮಾಜಿ ಸಿಎಂ ಡಿ. ವಿ. ಸದಾನಂದ ಗೌಡ ಅವರ ಬ್ಯಾಂಕ್ ಖಾತೆ ಹ್ಯಾಕ್ ಆಗಿ, ಸೈಬರ್ ಕಳ್ಳರು ₹3 ಲಕ್ಷ ಹಣ ದೋಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಆರ್‌ಎಂವಿ ಎಕ್ಸ್‌ಟೆನ್ನನ್‌ನ ಬಿಬಿಎಂಪಿ ಪಾರ್ಕ್‌ನಲ್ಲಿ ಆಯೋಜಿಸಿದ್ದ 75 ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಈ ಬಗ್ಗೆ ಮಾತನಾಡಿದ್ದಾರೆ.
'ನನ್ನ ಮೂರು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ. ಪ್ರತಿಯೊಂದು ಖಾತೆಯಿಂದಲೂ ತಲಾ ಒಂದು ಲಕ್ಷ ರೂ. ಹಣವನ್ನು ಎಗರಿಸಲಾಗಿದೆ. ಒಟ್ಟಾರೆ ಸುಮಾರು ₹3 ಲಕ್ಷ ಹಣ ಕಳೆದುಹೋಗಿದೆ. ಎಚ್‌ಡಿಎಫ್‌ಸಿ, ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಯುಪಿಐ ಮೂಲಕ ಕಳ್ಳತನ ಮಾಡಿದ್ದಾರೆ. ಈ ಕುರಿತು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡುತ್ತೇನೆ'ಎಂದು ಹೇಳಿದ್ದಾರೆ.