
Udಧರ್ಮಸ್ಥಳ: ಎರಡನೇ ಹಂತದ ಶೋಧಕಾರ್ಯ ಪ್ರಾರಂಭ- ಬಂಗ್ಲೆಗುಡ್ಡೆಯ 15 ಎಕರೆ ಪ್ರದೇಶದಲ್ಲಿ ಅಸ್ಥಿಪಂಜರ ಶೋಧ
17/09/2025 07:26 AM
ಧರ್ಮಸ್ಥಳ: ಧರ್ಮಸ್ಥಳ ಪ್ರಕರಣದ ಎಸ್ ಐಟಿ ತನಿಖೆಯಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಚಿನ್ನಯ್ಯನ ಬಳಿಕ ಇದೀಗ ಎರಡನೇ ಹಂತದಲ್ಲಿ ಬಂಗ್ಲೆಗುಡ್ಡೆ ಶೋಧಕಾರ್ಯ ಪ್ರಾರಂಭಗೊಂಡಿದೆ.
ಸ್ಥಳ ಮಹಜರಿನ ಬಳಿಕ ಹಲವಾರು ಅಸ್ಥಿಪಂಜರ ಸಿಕ್ಕಿದೆ ಎಂದು ಸೌಜನ್ಯ ಮಾವ ವಿಠಲಗೌಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಅಲ್ಲದೆ ತುಕಾರಾಮ ಗೌಡ, ಪುರಂದರ ಗೌಡ ಕೂಡಾ ಈ ಹಿಂದೇ ಇದೇ ಆರೋಪ ಮಾಡಿದ್ದರು. ಈ ಹಿನ್ನಲೆಯಲ್ಲಿ ಇಡೀ 15 ಎಕರೆಯ ಬಂಗ್ಲೆಗುಡ್ಡೆಯಲ್ಲಿ ಶೋಧ ನಡೆಸಲು 50 ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಕಾಡುಪ್ರದೇಶಕ್ಕೆ ಎಸ್ ಐಟಿ ಅಧಿಕಾರಿಗಳು ಇಂದು ತೆರಳಿದ್ದಾರೆ.ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನ ಪ್ರದೇಶದಲ್ಲಿ ಅರಣ್ಯ ಇಲಾಖೆ ತಂಡ, ಫೋರೆನ್ಸಿಕ್ ತಂಡ, ವೈದ್ಯರು, ಪೊಲೀಸರು ಶೋಧಕಾರ್ಯದಲ್ಲಿ ಭಾಗಿಯಾಗಿದ್ದಾರೆ.ಚಿನ್ನಯ್ಯ ಈ ಹಿಂದೆ ತೋರಿಸಿದ್ದ 13 ಸ್ಥಳದಲ್ಲಿ ಯಾವುದೇ ಬುರುಡೆ ಸಿಕ್ಕಿರಲಿಲ್ಲ.ಇದೀಗ ಸಾಕ್ಷಿದಾರ ಚಿನ್ನಯ್ಯ ಜೈಲಿನಲ್ಲಿದ್ದು ,ಸೌಜನ್ಯ ಮಾವ ವಿಠಲಗೌಡ ವಿಡಿಯೋ ಹೇಳಿಕೆ ಆಧಾರದಲ್ಲಿ ಶೋಧಕಾರ್ಯ ಪ್ರಾರಂಭಗೊಂಡಿದೆ.