
ಉಡುಪಿ: ಉತ್ತಮ ಕ್ರಿಕೆಟಿಗ , ಉದ್ಯಮಿ ಪ್ರದೀಪ್ (ಮಾಣಿ) ಅಂಬಲಪಾಡಿ ಹೃದಯಾಘಾತದಿಂದ ನಿಧನ
09/09/2025 05:12 AM
ಉಡುಪಿ: ಉತ್ತಮ ಕ್ರಿಕೆಟಿಗ , ಉದ್ಯಮಿ ಪ್ರದೀಪ್ (ಮಾಣಿ) ಅಂಬಲಪಾಡಿ (52) ಹೃದಯಾಘಾತದಿಂದ ನಿಧನರಾದರು. ಸೋಮವಾರ ರಾತ್ರಿ ಗಂಟೆ 9:30 ಕ್ಕೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಮಲ್ಪೆಯ ಪ್ರಮೋದ್ ಮಧ್ವರಾಜ್ ಒಡೆತನದ ಪೆಟ್ರೋಲ್ ಪಂಪ್ ನಲ್ಲಿ ಮೆನೇಜರ್ ಆಗಿ ಸೇವೆ ಸಲ್ಲಿಸಿದ್ದ ಇವರು ಸದ್ಯ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಉಡುಪಿಯ ಕ್ರಿಕೆಟ್ ಪ್ಯಾರಡೈಸ್ ತಂಡದಲ್ಲಿ ಓಪನ್ ಆಗಿ ಮಿಂಚಿದ ಕ್ರಿಕೆಟ್ ಪಟು ಇವರಾಗಿದ್ದರು. ಸ್ನೇಹಿತರು ಇವರನ್ನು ಮಾಣಿಯಂದೇ ಕರೆಯುತ್ತಿದ್ದರು. ಉತ್ತಮ ಜಿಮ್ ಪಟು ಕೂಡ ಆಗಿದ್ದು ಎಲ್ಲರ ಜೊತೆ ಸ್ನೇಹಜೀವಿಯಾಗಿದ್ದರು.ಇವರ ನಿಧನಕ್ಕೆ ಸಮಾಜಸೇವಕ ಗಣೇಶ್ ರಾಜ್ ಸರಳೆಬೆಟ್ಟು ಸಂತಾಪ ಸೂಚಿಸಿದ್ದಾರೆ.