
ಬೆಳಪು ಭಾರೀ ಮಳೆಗೆ ಮನೆ ಕುಸಿದು ಜೀವನ್ಮರಣ ಹೋರಾಟದಲ್ಲಿರುವ ಶೋಭಾ ಪೂಜಾರಿ ನೆರವಿಗೆ ಸಹಕರಿಸಿ- ಗೀತಾಂಜಲಿ ಸುವರ್ಣ
ಬೆಳಪು: ಆಗಸ್ಟ್ 28ಕ್ಕೆ ಬಂದ ಭೀಕರ ಮಳೆಗೆ ಬೆಳಪು ಗ್ರಾಮದ ಶೋಭಾ ಪೂಜಾರಿಯವರ ಮನೆ ಕುಸಿದು ಅವರು ಜೀವನ್ಮರಣ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಇದ್ದಾರೆ. ನೆರೆಕೆರೆಯವರು ಕಣ್ಣೀರು ಹಾಕುತಿದ್ದಾರೆ. ಎರಡು ಹೆಣ್ಣು ಮಕ್ಕಳು ತಾಯಿಗಾಗಿ ರೋದಿಸುತಿದ್ದಾರೆ. ನಮ್ಮ ಶಾಸಕರು ಸುರೇಶ್ ಅಣ್ಣ ತಕ್ಷಣ ತಹಶೀಲ್ದಾರರು ಹಾಗು ಆಸ್ಪತ್ರೆಗೆ ತಿಳಿಸಿ ಅಯುಷ್ಮಾನ್ ಹಾಗು ಸರಕಾರದಿಂದ ಸಿಗುವ 1.20 ಲಕ್ಷ ತೆಗೆದು ಕೊಟ್ಟು, ಇವತ್ತು ಸ್ವತಃ ಅಲ್ಲಿಗೆ ಬಂದು ಮಕ್ಕಳಿಗೆ ನಾನಿದ್ದೇನೆ, ಎನ್ನುವ ದ್ಯರ್ಯ ಹೇಳಿ ರುವುದು ಅವರ ಮಾನವೀಯತಗೆ ಇನ್ನೊಂದು ಗರಿ. ಮಕ್ಕಳೊಂದಿಗೆ ನಾನು ಇದ್ದೇನೆ. ಆ ಮಕ್ಕಳ ತಾಯಿ ಶೋಭಕ್ಕ ಬರುವವರೆಗೆ ಮಕ್ಕಳಿಗೆ ತಾಯಿಯಾಗಿ ನಾನಿದ್ದೇನೆ ಎನ್ನುವ ಮಾತು ಕೊಟ್ಟಿದ್ದೇನೆ. ಇಡೀ ಊರೇ ಆ ಕುಟುಂಬದ ಜೊತೆಗಿದೆ.ಜಾತಿ ಮತ ಭೇದವಿಲ್ಲದೆ ಅವರ ಚಿಕಿತ್ಸಗೆ ಹಣ ಒಟ್ಟಾಗುತ್ತಿದೆ. ಕಾರುಣ್ಯ ನಿಧಿ ಟ್ರಸ್ಟ್ ಇವರ ಸಹಾಯಕ್ಕೆ ನಿಂತಿದೆ. ಬಿ ಎಸ್ ಎನ್ ಡಿ ಪಿ ಯ ಜಿಲ್ಲಾಧ್ಯಕ್ಷರು, ಅತ್ಹ್ಮಿಯ ಸಹೋದರ ಶ್ರೀಧರ್ ಅಮೀನ್, ಶಾಸಕರು, ಗ್ರಾ ಪಂ ಅಧ್ಯಕ್ಷರು ಸಹೋದರ ದೇವಿಪ್ರಸಾದ್ ಶೆಟ್ಟಯವರು ಊರಿನ ಬಂಧುಗಳ ಜೊತೆ ಸೇರಿ ಮನೆ ಕಟ್ಟಿ ಕೊಡುವುದಾಗಿ ನಾನು ಜೊತೆ ಸೇರಿ ನಿರ್ಧರಿಸಿದ್ದೇವೆ.ಈ ಕುಟುಂಬ ಕ್ಕೆ ನಿಮ್ಮ ಹಾರೈಕೆ ಇರಲಿ ಎಂದು ಬಿಜೆಪಿ ಮುಖಂಡರಾದ ಗೀತಾಂಜಲಿ ಸುವರ್ಣ ಹೇಳಿದ್ದಾರೆ.