
ಉಡುಪಿ:ಶಿಕಾರಿಗೆ ಹೋದವರಿಂದ ಅಜಾಗರೂಕತೆ, ಕಾರಿಗೆ ತಗುಲಿದ ಗುಂಡು- ಆರೋಪಿಗಳ ಬಂಧನ ,ಕೋವಿ ವಶ
ಉಡುಪಿ: ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿಕಾರಿಗೆ ಹೋಗಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಲೈಸನ್ಸ್ ಇಲ್ಲದ ತೋಟೆಕೋವಿಯಲ್ಲಿ ಗುಂಡುಹಾರಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರದೀಪ್ (32)ಮತ್ತು ಮನೋಜ್ (25)ಆರೋಪಿಗಳು.
ಇವರು ಹಿರಿಯಡ್ಕ ಠಾಣೆ ವ್ಯಾಪ್ತಿಯ ಕಣಜಾರು ಗುರುರಾಜ್ಮಂಜಿತ್ತಾಯರರ ಮನೆಯ ಸಮೀಪದ ಹಾಡಿಯ ಬಳಿ ಶಿಕಾರಿ ಮಾಡುವ ಉದ್ದೇಶದಿಂದ ಹೋಗಿದ್ದರು. ಯಾವುದೇ ಮುಂಜಾಗ್ರತಾ ಕ್ರಮವನ್ನು ವಹಿಸದೇ ಅಜಾಗರೂಕತೆಯಿಂದ, ಬಂದೂಕಿನಿಂದ ಗುಂಡು ಹಾರಿಸಿದ್ದು , ಗುಂಡು ಕಾರಿನ ಗಾಜಿಗೆ ತಾಗಿ, ಮರದ ಬಾಗಿಲಿಗೆ ಬಡಿದಿದೆ. ಈ ಬಗ್ಗೆ ಹಿರಿಯಡ್ಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಲೈಸನ್ಸ್ ಇಲ್ಲಂದ ತೋಟೆ ಕೋವಿ(ಅಂದಾಜು ಮೌಲ್ಯ 50 ಸಾವಿರ ರೂ), 7 ತೋಟೆಗಳು, ಕೃತ್ಯಕ್ಕೆ ಬಳಸಿದ್ದ ಬಜಾಜ್ ಡಿಸ್ಕವರ್ ಮೋಟಾರ್ ಸೈಕಲ್ (ಅಂದಾಜು ಮೌಲ್ಯ 40 ಸಾವಿರ ರೂ)ನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.