
ಉಡುಪಿ:ಸೆ.7ರ ರವಿವಾರ ಖಗ್ರಾಸ ಚಂದ್ರಗ್ರಹಣ ವೀಕ್ಷಣೆಗೆ ಪರ್ಕಳದಲ್ಲಿ ಸಿದ್ಧತೆ
04/09/2025 06:58 AM
ಉಡುಪಿ: ಪರ್ಕಳದ ಪಾಟೀಲ್ ಕ್ಲಾತ್ ಸ್ಟೋರ್ ಎದುರುಗಡೆ ಇರುವ ಸ್ವಾಗತ ಹೋಟೆಲ್ ಬಳಿ ಸೆ.7ರ ರವಿವಾರ ಹುಣ್ಣಿಮೆಯಂದು ನಡೆಯುವ ಖಗ್ರಾಸ ಚಂದ್ರಗ್ರಹಣವನ್ನು ವೀಕ್ಷಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಣಿಪಾಲ ಪರ್ಕಳದ ಆರ್. ಮನೋಹರ್ ಅವರು ಆವಿಷ್ಕರಿಸಿದ ಟೆಲಿಸ್ಕೋಪ್ ಮೂಲಕ ಹುಣ್ಣಿಮೆಯಂದು ರಕ್ತ ಚಂದಿರದಂತೆ ಗೋಚರಿಸುವ ಖಗ್ರಾಸ ಚಂದ್ರಗ್ರಹಣವನ್ನು ರವಿವಾರ ರಾತ್ರಿ 9 ಗಂಟೆಯಿಂದ ಗ್ರಹಣ ಮುಕ್ತಾಯದವರೆಗೆ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಖಗೋಳ ಆಸಕ್ತರು ಇದರ ಪ್ರಯೋಜನ ಪಡೆಯಬಹುದು ಎಂದು ಕಾರ್ಯಕ್ರಮದ ಸಂಘಟಕ ಗಣೇಶ್‌ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9845690278ನ್ನು ಸಂಪರ್ಕಿಸಬಹುದು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.