ನವದೆಹಲಿ: ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ಬೆಲೆ ಇಳಿಕೆ- ಇಂದಿನಿಂದಲೇ ಹೊಸ ದರ ಜಾರಿ

ನವದೆಹಲಿ: ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ಬೆಲೆ ಇಳಿಕೆ- ಇಂದಿನಿಂದಲೇ ಹೊಸ ದರ ಜಾರಿ

 


ನವದೆಹಲಿ: ದೇಶದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಅಡುಗೆ ಅನಿಲದ ಬೆಲೆಯನ್ನು  ಇಳಿಸುವುದಾಗಿ ತೈಲ ಕಂಪೆನಿಗಳು ಘೋಷಣೆ ಮಾಡಿವೆ.

ಆಗಸ್ಟ್ 31 ರ ಮಧ್ಯರಾತ್ರಿ ತೈಲ ಕಂಪನಿಗಳು ಬೆಲೆ ಇಳಿಕೆ ಮಾಡಿದ್ದು ಇಂದಿನಿಂದ (ಸೆ.1) 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ರೂ. 51.50 ರಷ್ಟು ಕಡಿಮೆಯಾಗಿದೆ.ಅದರಂತೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ನ ಪರಿಷ್ಕೃತ ದರ ರೂ. 1,580 ಆಗಿದೆ. ಮುಂಬೈನಲ್ಲಿ, ರೂ. 1,531.50 ಕ್ಕೆ ಇಳಿದಿದೆ, ಕೋಲ್ಕತ್ತಾದಲ್ಲಿ ರೂ. 1,684 ಆಗಿದ್ದು ಜೊತೆಗೆ ಪಾಟ್ನಾದಲ್ಲಿ ಅತಿ ಹೆಚ್ಚು ಬೆಲೆ ಇದ್ದು, ಅಲ್ಲಿ ಸಿಲಿಂಡರ್‌ನ ಬೆಲೆ ರೂ. 1,829 ಇದೆ.

ಗೃಹಬಳಕೆ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆ ಇಲ್ಲ:

ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಗೃಹಬಳಕೆಯ ಎಲ್‌ಪಿಜಿ (14.2 ಕೆಜಿ) ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ರೂ. 853. ಮುಂಬೈನಲ್ಲಿ ರೂ. 852.5, ಕೋಲ್ಕತ್ತಾದಲ್ಲಿ ರೂ. 879 ಮತ್ತು ಪಾಟ್ನಾದಲ್ಲಿ ರೂ. 942.50 ಇದೆ.

Ads on article

Advertise in articles 1

advertising articles 2

Advertise under the article