ಉಡುಪಿ:ಸೆಪ್ಟೆಂಬರ್ 3:  ಉಡುಪಿ ಮೊಬೈಲ್ ರಿಟೇಟರ್ಸ್ ಅಸೋಸಿಯೇಷನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಉಡುಪಿ:ಸೆಪ್ಟೆಂಬರ್ 3: ಉಡುಪಿ ಮೊಬೈಲ್ ರಿಟೇಟರ್ಸ್ ಅಸೋಸಿಯೇಷನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

 


ಉಡುಪಿ: ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (ಯುಎಂಆರ್ ಎ)ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ. 3ರಂದು ಸಂಜೆ 6 ಗಂಟೆಗೆ ಅಜ್ಜರಕಾಡಿನ ಟೌನ್ ಹಾಲ್‌ನಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಜಿ. ಸುವರ್ಣ ಅವರು, ಎಐಎಂಆರ್ ಎ ಕರ್ನಾಟಕದ ರಾಜ್ಯಾಧ್ಯಕ್ಷ ರವಿಕುಮಾರ್ ಕೆ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದರು.

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ‌ ಡಾ. ಜಿ. ಶಂಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ ಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಎಸ್ ಟಿ ಮಂಗಳೂರು ವಿಭಾಗದ ಲಕ್ಷ್ಮೀಪತಿ ನಾಯಕ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ವಕೀಲರಾದ ಶಾಂತಾರಾಮ್ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಪ್ರಶಾಂತ್ ಶೆಣೈ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೊಬೈಲ್ ಉದ್ಯಮ ಪ್ರತಿನಿಧಿಗಳಾಗಿ ಸದಾನಂದ್ (ಶಿಯೋಮಿ), ವಿನ್ನಿಲ್ ಕುಮಾರ್ (ವಿವೋ), ಚೇತನ್ ಎಂ (ಒಪ್ಪೋ), ಮತ್ತು ಸೋಮಶೇಖರ್ (ನಥಿಂಗ್), ಅಲ್ ಇಂಡಿಯಾ ಮೊಬೈಲ್ ರಿಟೇಲರ್ ಅಸೋಸಿಯೇಷನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನವ್ನೀತ್ ಪಾಠಕ್, ರಾಜ್ಯ ಅಧ್ಯಕ್ಷ ರವಿಕುಮಾರ್ ಕೆ., ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸುಹಾಸ್ ಕಿಣಿ, ರಾಜ್ಯ ಉಪಾಧ್ಯಕ್ಷ ಮೋಹನ್ ಹುಗಾರ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸಂದೇಶ್ ಬಲ್ಲಾಳ್, ಗೌರವ ಸಲಹೆಗಾರ ರಾಜೇಶ್ ಮಾಬಿಯನ್, ಕಾರ್ಯದರ್ಶಿ ಖಾದರ್, ಕುಂದಾಪುರ ವಿಭಾಗದ ಗೌರವಾಧ್ಯಕ್ಷ ಇರ್ಷಾದ್, ಮಲ್ಪೆ ವಿಭಾಗದ ಅಧ್ಯಕ್ಷ ಜೋಯಲ್ ಅಮನ್ನ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ವಿವೇಶ್ ಜಿ ಸುವರ್ಣ, ಕಾರ್ಯದರ್ಶಿಯಾಗಿ ಖಾದರ್, ಖಜಾಂಚಿಯಾಗಿ ಇಮ್ರಾನ್, ಜಂಟಿ ಕಾರ್ಯದರ್ಶಿಯಾಗಿ ಸುದರ್ಶನ್ ಬಿ., ಉಪಾಧ್ಯಕ್ಷರಾಗಿ ರಂಜಿತ್ ಶೆಟ್ಟಿ, ರಾಹುಲ್ ಉದ್ಯಾವರ, ಗಣೇಶ್ ಮತ್ತು ಧನಂಜಯ್ ಅವರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ನಂದೇಶ್ ಬಲ್ಲಾಳ್ ಮತ್ತು ಗೌರವ ಸಲಹೆಗಾರರಾಗಿ ರಾಜೇಶ್ ಮಾಬಿಯನ್, ಸಲೀಂ, ಹಾಗೂ ಪ್ರಶಾಂತ್ ಕಿಣಿ, ವಿಭಾಗವಾರು ಅಧ್ಯಕ್ಷರುಗಳಾಗಿ: ಮಹೇಶ್ ಪೂಜಾರಿ (ಕುಂದಾಪುರ), ಅಜಿತ್ ಕುಮಾರ್ (ಕಾರ್ಕಳ), ಜೋಯಲ್ ಅಮನ್ನ (ಮಲ್ಪೆ), ಶ್ರೀಕಾಂತ್ (ಕಾಪು), ವೆಂಕಟೇಶ್ ಪೂಜಾರಿ (ಬ್ರಹ್ಮಾವರ), ಪ್ರಶಾಂತ್ (ಮಣಿಪಾಲ) ಆಯ್ಕೆಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article