
ಉಡುಪಿ: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ನಿಂದ ದೊಡ್ಡಣಗುಡ್ಡೆ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ಸಾಹಿತ್ಯೋತ್ಸವ ಸಂಭ್ರಮ- 2025
ಉಡುಪಿ: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ನಿಂದ ದೊಡ್ಡಣಗುಡ್ಡೆ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ಸಾಹಿತ್ಯೋತ್ಸವ ಸಂಭ್ರಮ- 2025 ಸಂಪನ್ನಗೊಂಡಿತು.ಎರಡು ದಿನಗಳ ಸಾಹಿತ್ಯೋತ್ಸವ ಶನಿವಾರ ಅಹಮದ್ ಅಲ್ ಹಾದಿ (ರ.ಅ) ರವರ ದರ್ಗಾ ಝಿಯಾರತ್ ನೊಂದಿಗೆ ಉದ್ಘಾಟನೆಗೊಂಡಿತು.ನಂತರ ಧ್ವಜಹಾರೋಹಣ ನಡೆಸಲಾಯಿತು.
ಶನಿವಾರ ಸಂಜೆ 5.45 ಕ್ಕೆ ಸ್ಫರ್ಧಾ ಕಾರ್ಯಕ್ರಮ ಆರಂಭಗೊಂಡು ರಾತ್ರಿ ಮುಕ್ತಾಯಗೊಂಡಿತು.ಆದಿತ್ಯವಾರ ಬೆಳಿಗ್ಗೆ 8 ಗಂಟೆಗೆ ಸ್ಫರ್ಧಾ ಕಾರ್ಯಕ್ರಮ ಮುಂದುವರಿಯಿತು. ಹಲವು ಮದರಸಾಗಳಿಂದ ಆಗಮಿಸಿದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಭಾನುವಾರ ಸಂಜೆ 3 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಸಪ್ವಾನ್ ರಂಗನಕೆರೆ ಪ್ರಶಸ್ತಿ ಪ್ರದಾನ ಮತ್ತು ಬಹುಮಾನ ವಿತರಣೆ ನಡೆಯಿತು.
ಸಾಹಿತ್ಯೋತ್ಸವ ಕಾರ್ಯಕ್ರಮದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾದ ಕಾಸಿಂ ಸಅದಿ,ಅಧ್ಯಕ್ಷರಾದ ಮೊಹಮ್ಮದ್ ಕಾಸಿಂ, ಉಪಾಧ್ಯಕ್ಷರಾದ ಜುನೈದ್, ಕಾರ್ಯದರ್ಶಿ ರಫೀಕ್, ಖಜಾಂಜಿ ಮುನೀರ್, ಅಬ್ದುಲ್ ರಹ್ಮಾನ್ ಸಅದಿ, ಇಬ್ರಾಹಿಂ ಫುರ್ಖಾನಿ, ಉಮರಲ್ ಫಾರೂಕ್ ಹನೀಫಿ,SSF ಉಡುಪಿ ಡಿವಿಷನ್ ಅಧ್ಯಕ್ಷ ಇಮ್ತಿಯಾಝ್ ಸಂತೋಷ್ ನಗರ, ಕೋಶಾಧಿಕಾರಿ ಮುತ್ತಲಿಬ್ ರಂಗನಕೆರೆ, ಡಿವಿಷನ್ ಸಹಕಾರ ತಂಡದ ಸದಸ್ಯರಾದ ಸಿದ್ದೀಕ್ , ಮಜೀದ್ ಕಟಪಾಡಿ, ನಾಸೀರ್ ಬಿ.ಕೆ, ನಝೀರ್ ಸಾಸ್ತಾನ , ಆಸೀಫ್ ಸರಕಾರಿಗುಡ್ಡೆ, ರಝಾಕ್ ಉಸ್ತಾದ್, ಇಬ್ರಾಹಿಮ್ ಪಾಲಿಲಿ ಮಣಿಪುರ . ಯುನಿಟ್ ಅಧ್ಯಕ್ಷ ತಮೀಮ್ ಅಲಿ ,ಕಾರ್ಯದರ್ಶಿ ಫಾರೂಕ್ ಪಿಕೆ ,ಖಜಾಂಜಿ ಆಕಿಬ್ ಮತ್ತಿತರರು ಉಪಸ್ಥಿತರಿದ್ದರು.