
ಕಾರ್ಕಳ:ಪತ್ನಿಯಿಂದಲೇ ಪತಿಯ ಮೇಲೆ ಕತ್ತಿಯಿಂದ ಕಡಿದು ಕೊಲೆಯತ್ನ !
ಕಾರ್ಕಳ: ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿಯಲ್ಲಿ ಪತ್ನಿಯೇ ಪತಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೇಖರ್ ಮೂಲ್ಯ (60) ಎಂಬವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿ ಗಾಯಾಳು ಶೇಖರ್ ಮೂಲ್ಯ ಅವರ ಪತ್ನಿ ಮಾಲತಿ ಪೊಲೀಸರಿಗೆ "ಯಾರೋ ಅಪರಿಚಿತರು ಹಲ್ಲೆ ನ ಡೆಸಿದ್ದಾರೆ'' ಎಂದು ಮೊದಲಿಗೆ ಮಾಹಿತಿ ನೀಡಿದ್ದರು. ಸೂಕ್ತ ವಿಚಾರ ಣೆ ಕೈಗೊಂಡ ಪೊಲೀಸರು ಗ್ರಾಮಸ್ಥರಿಂದಲೂ ಮಾಹಿತಿ ಸಂಗ್ರ ಹಿಸಿದ್ದಾರೆ. ವಿಚಾರಣೆ ವೇಳೆ ಗಂಡ ಕುಡಿದು ಗಲಾಟೆ ಮಾಡುತ್ತಿದ್ದ ಕಾರಣದಿಂದಲೇ ತಾನೇ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ಮಾಲತಿ ಬಳಿಕ ಒಪ್ಪಿಕೊಂಡಿದ್ದಾರೆ.
ಮಾಲತಿ ಮೂಲ್ಯ ಅವರು ಮಗಳಿಗೆ ದೂರವಾಣಿ ಕರೆ ಮಾಡಿ "ನಿನ್ನ ತಂದೆಗೆ ಯಾರೋ ಕತ್ತಿಯಿಂದ ಹಲ್ಲೆ ನಡೆಸಿ ಮೃತಪಟ್ಟಿದ್ದಾರೆ" ಎಂದು ತಿಳಿಸಿದರಲ್ಲದೆ, ಆಕೆ ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮಾಡಿದ್ದಳು. ಬಳಿಕ ಗಾಯಾಳು ಶೇಖರ್ ಮೂಲ್ಯ ಅವರನ್ನು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ನಿ ಮಾಲತಿ ಮೂಲ್ಯರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗಂಡ-ಹೆಂಡತಿ ಇಬ್ಬರೂ ಹಳೆಯ ಅಪರಾಧ ಪ್ರಕರಣದ ಆರೋಪಿಯಾಗಿದ್ದು, 2011ರಲ್ಲಿ ನೆರೆಮನೆಯ ರಾಮಣ್ಣ ಕುಲಾಲ್ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ, 2021ರಲ್ಲಿ ಬಿಡುಗಡೆ ಹೊಂದಿದ್ದರು ಎಂದು ತಿಳಿದು ಬಂದಿದೆ.