ಮಣಿಪಾಲ: ಟೆಲಿಸ್ಕೋಪ್ ನಲ್ಲಿ ರಕ್ತಚಂದಿರನ ನೋಡಿದ ನೂರಾರು ಕುತೂಹಲಿಗರು ,ವಿದ್ಯಾರ್ಥಿಗಳು

ಮಣಿಪಾಲ: ಟೆಲಿಸ್ಕೋಪ್ ನಲ್ಲಿ ರಕ್ತಚಂದಿರನ ನೋಡಿದ ನೂರಾರು ಕುತೂಹಲಿಗರು ,ವಿದ್ಯಾರ್ಥಿಗಳು

 


ಮಣಿಪಾಲ: ಪರ್ಕಳದ ಪಾಟೀಲ್ ಕ್ಲಾತ್ ಸ್ಟೋರ್ ಎದುರು ರವಿವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನ ಕುತೂಹಲಿಗರು , ವಿದ್ಯಾರ್ಥಿಗಳು ಕೆಂಬಣ್ಣದ ಚಂದಿರನ ಕಂಡು ಪುಳಕಗೊಂಡರು.

ಮಣಿಪಾಲ ಪರ್ಕಳದ ಆರ್. ಮನೋಹರ್ ಅವರು ಆವಿಷ್ಕರಿಸಿದ ಟೆಲಿಸ್ಕೋಪ್ ಮೂಲಕ ರಕ್ತ ಚಂದಿರದಂತೆ ಗೋಚರಿಸಿದ ಖಗ್ರಾಸ ಚಂದ್ರಗ್ರಹಣವನ್ನು ವೀಕ್ಷಣೆ ಮಾಡಲಾಯಿತು. ವೀಕ್ಷಣೆ ಮಾಡಿದ್ದಲ್ಲದೆ ಖಗೋಳ ಆಸಕ್ತರಿಗೆ ಗ್ರಹಣದ ಬಗ್ಗೆ  ಸಂಘಟಕ ಗಣೇಶ್‌ರಾಜ್ ಸರಳೇಬೆಟ್ಟು ಮತ್ತು ಮನೋಹರ್ ಅವರು ಮಾಹಿತಿ ನೀಡಿದರು.  ಆರ್ ಮನೋಹರ್ ಅವರ ದೂರದರ್ಶಕದಲ್ಲಿ  ಕಣ್ಣ ದೂರ  ದೃಷ್ಟಿಗಿಂತ ಸುಮಾರು ನೂರ ಎಪ್ಪತ್ತು ಪಟ್ಟು ಹೆಚ್ಚು ಸ್ಪುಟವಾಗಿ  ಪೂರ್ಣಚಂದ್ರ ಕಾಣಸಿಕ್ಕಿತು.ರಾತ್ರಿ ಗಂಟೆ 10:15 ರಿಂದ ಆರಂಭಗೊಂಡು 11.30ರ ತನಕ ಚಂದಿರನ ವಿವಿಧ ಆಕೃತಿಗಳನ್ನು ಸೆರೆಹಿಡಿಯಲಾಯಿತು.

Ads on article

Advertise in articles 1

advertising articles 2

Advertise under the article