
ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತರಿಂದ ಮೊಂತಿ ಹಬ್ಬ ಆಚರಣೆ- ಇದು ಪ್ರಕೃತಿಯ ಆರಾಧನೆ
08/09/2025 11:09 AM
ಉಡುಪಿ : ಮಾತೆ ಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್ ನ್ನು ಉಡುಪಿ ಧರ್ಮಪ್ರಾಂತ್ಯದ ವಿವಿಧ ಚರ್ಚ್ ಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋ ಉಡುಪಿ ಶೋಕ ಮಾತ ಇಗರ್ಜಿಯಲ್ಲಿ ಪವಿತ್ರ ಬಲಿಪೂಜೆಯನ್ನು ಸರ್ಮಪಿಸಿದರು.
ಕರಾವಳಿ ಕ್ರೈಸ್ತರು ಮಾತೆ ಮರಿಯಮ್ಮನವರ ಜನ್ಮ ದಿನವನ್ನು ಮೊಂತಿ ಹಬ್ಬವಾಗಿ, ಹೊಸ ತೆನೆಯ ಹಬ್ಬವನ್ನಾಗಿ ಆಚರಿಸುತ್ತಾರೆ. ಚರ್ಚ್ ಗಳಲ್ಲಿ ಪುಟ್ಟ ಮಕ್ಕಳು ಮಾತೆ ಮರಿಯಮ್ಮನವರಿಗೆ ಹೂಗಳನ್ನು ಸರ್ಮಪಿಸಿದರು. ಇದೇ ಸಂಧರ್ಭದಲ್ಲಿ ಹೊಸ ತೆನೆಯನ್ನು ಆಶೀರ್ವದಿಸಿ ಭಕ್ತರಿಗೆ ಹಂಚಲಾಯಿತು. ಮೊಂತಿ ಹಬ್ಬದ ಸಲುವಾಗಿ ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆಗಳು ಜರಗಿದವು. ಹೊಸ ತೆನೆ ಯನಮಿಶ್ರ ಮಾಡಿದ ಪಾಯಸವನ್ಬು ಕೂಡಾ ಜನರಿಗೆ ಚರ್ಚ್ ವತಿಯಿಂದ ಇದೇ ಸಂಧರ್ಭದಲ್ಲಿ ನೀಡಲಾಯಿತು. ಸಾವಿರಾರು ಮಂದಿ ಭಕ್ತಾದಿಗಳು ಈ ಸಂಧರ್ಭದಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದರು.