ಕಾರ್ಕಳ: ಅಭಿವೃದ್ಧಿ ಕಾಮಗಾರಿಗೆ ಶಾಸಕರಿಗೆ ಕೋಟ್ಯಾಂತರ ರೂ ಅನುದಾನ-ಉತ್ತಮ ಗುಣಮಟ್ಟದ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ- ಶುಭದರಾವ್

ಕಾರ್ಕಳ: ಅಭಿವೃದ್ಧಿ ಕಾಮಗಾರಿಗೆ ಶಾಸಕರಿಗೆ ಕೋಟ್ಯಾಂತರ ರೂ ಅನುದಾನ-ಉತ್ತಮ ಗುಣಮಟ್ಟದ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ- ಶುಭದರಾವ್

 


ಉಡುಪಿ: ರಾಜ್ಯದ ಅಭಿವೃದ್ಧಿ ಚಿಂತನೆಯೊಂದಿಗೆ ಪಕ್ಷ ಬೇದವಿಲ್ಲದೆ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಕೋಟ್ಯಾಂತರ ರೂ ಅನುದಾನ ಬಿಡುಗಡೆ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಬಿಡುಗಡೆಗೊಂಡ ಅನುದಾನಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ ಎನ್ನುವುದು ಕಾಂಗ್ರೆಸ್ ಬಯಸುತ್ತದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ತಿಳಿಸಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಯ ಬದುಕಿಗೆ ಅಮೂಲ್ಯ ಕೊಡುಗೆಗನ್ನು ನೀಡುತ್ತಾ ಬಂದಿರುವ  ರಾಜ್ಯ ಸರಕಾರವು ಇತರ ಅಭಿವೃದ್ಧಿ ಕೆಲಸಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸುವ ಭರವಸೆಯನ್ನು ನೀಡುವ ಮೂಲಕ ಅಭಿವೃದ್ಧಿ ಶೂನ್ಯ ಸರಕಾರ ಎಂದು ಅಪಪ್ರಚಾರ ಮಾಡುತ್ತಿದ್ದ ಬಿಜೆಪಿ ಶಾಸಕರಿಗೆ ತಕ್ಕ ಉತ್ತರ ನೀಡಿದಂತಾಗಿದೆ ಎಂದರು.

ಗ್ಯಾರಂಟಿ ಯೋಜನೆಯ ಮೂಲಕ  ರಾಜ್ಯದ ಜನರು ನೇರವಾಗಿ ಸವಲತ್ತುಗಳನ್ನು ಪಡೆಯುವುದರಿಂದ 40 ಶೇಕಡಾ ಕಮಿಷನ್ ಆರೋಪದ ಹೊತ್ತಿರುವ ಬಿಜೆಪಿ ಶಾಸಕರಿಗೆ  ಬೇರೆ ದಾರಿ ಇಲ್ಲದೆ ಸರಕಾರವನ್ನು ದೂರುವುದೇ ಕೆಲಸವಾಗಿದೆ. ಒಂದು ಕಡೆ ಸರಕಾರ ಅನುದಾನ ಬಿಡುಗಡೆ ಮಾಡವುದಿಲ್ಲ ಎಂದು ಆರೋಪಿಸುವ ಶಾಸಕರು ಕ್ಷೇತ್ರದಲ್ಲಿ ನಿರಂತರ ಉದ್ಘಾಟನಾ ಕಾರ್ಯಕ್ರಮಗಳನ್ನು ನಡೆಸಿ ಇದು ನನ್ನ ವಿಶೇಷ ಪ್ರಯತ್ನ ಎಂದು ಬಿಂಬಿಸುವುದು ಹಾಸ್ಯಾಸ್ಪದವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಅನುದಾನ ಎಷ್ಟು ಬಿಡುಗಡೆಯಾಗಿದೆ ಎನ್ನುವುದು ಮುಖ್ಯವಲ್ಲ, ಅದನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಲಾಗಿದೆ ಎನ್ನುವುದೇ ಮುಖ್ಯ, ನಗರದ ರಥಬೀದಿಯ ಒಳಚರಂಡಿ  ಕಾಮಗಾರಿ, ಪರಶುರಾಮ ಥೀಮ್ ಪಾರ್ಕ್, ನೀರಾವರಿ ಯೋಜನೆ, ಹೀಗೆ ಅನೇಕ ಕಾಮಗಾರಿಗಳು ಕಮಿಷನ್ ಆಸೆಗೆ ಬಲಿಯಾಗಿ ಕಳಪೆ ಕಾಮಗಾರಿ ಎಂದು ಸಾಬೀತಾಗಿದೆ. ಆದರೆ ಮುಂದೆ ನಡೆಯುವ ಕಾಮಗಾರಿಗಳೂ ಹೀಗಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಎಚ್ಚರವಹಿಸುವಂತೆ ಶಾಸಕರಿಗೆ ಮನವಿ ಮಾಡುತ್ತೇನೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article