ಕುಂದಾಪುರ: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲು ಆಟೋ ಚಾಲಕರ ಆಗ್ರಹ

ಕುಂದಾಪುರ: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲು ಆಟೋ ಚಾಲಕರ ಆಗ್ರಹ

 


ಕುಂದಾಪುರ: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ ಸಿಐಟಿಯು ವತಿಯಿಂದ ಮುಖ್ಯಮಂತ್ರಿಗೆ ಸಾಮೂಹಿಕವಾಗಿ ಪೋಸ್ಟ್ ಕಾರ್ಡ್ ಪೋಸ್ಟ್ ಮಾಡಲಾಯಿತು. ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಇರುವ ಪೋಸ್ಟ್ ಆಫೀಸ್ ಬಳಿ ಕಾರ್ಡ್ ಪೋಸ್ಟ್ ಮಾಡಿದ ಬಳಿಕ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ವಿ, ರಾಜ್ಯದಾದ್ಯಂತ ಇರುವ 8 ಲಕ್ಷ ಆಟೋ ಚಾಲಕರ ಹಾಗೂ ಅವರ ಕುಟುಂಬಕ್ಕೆ ಬೈಕ್ ಟ್ಯಾಕ್ಸಿ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಸ್ವಾಗತಿಸಿ, ಅಧ್ಯಕ್ಷರಾದ ರಮೇಶ್ ಅವರು ವಿ ಪ್ರಸ್ತಾವನೆ ಮಾತಾಡಿದರು. ಸಿಐಟಿಯು ಮುಖಂಡರಾದ ಎಚ್ ನರಸಿಂಹ , ಸಂಘದ ಗೌರವ ಅಧ್ಯಕ್ಷ ಕರುಣಾಕರ, ಮುಖಂಡರಾದ ಮಲ್ಲಿಕಾರ್ಜುನ, ಶೇಖರ್ ಪೂಜಾರಿ, ಕೃಷ್ಣ, ನರಸಿಂಹ ಕೇಶವ ಗೋವಿಂದ ಗುಡಾರಹಕ್ಲು, ರವಿ ವಿ ಎಂ, ಸಂತೋಷ್ ಕಲ್ಲಗರ ಮತ್ತಿತರರಿದ್ದರು.

Ads on article

Advertise in articles 1

advertising articles 2

Advertise under the article