
ಉಡುಪಿ: ಅಶ್ವತ ಎಲೆಯಲ್ಲಿ ಮೂಡಿ ಬಂದ ಶ್ರೀಗಳ ಭಾವಚಿತ್ರ- ಪರ್ಯಾಯ ಶ್ರೀಗಳ ಭೇಟಿ ಮಾಡಿ ಹಸ್ತಾಂತರ
27/08/2025 06:45 AM
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರನ್ನು ಸಾಮಾಜಿಕ ಕಾರ್ಯಕರ್ತ ಕಲಾವಿದ ಸರಳಬೆಟ್ಟು ಗಣೇಶ್ ರಾಜ್ ಅವರು ಭೇಟಿ ಮಾಡಿ ,ಅಶ್ವತ ಎಲೆಯಲ್ಲಿ ರಚಿಸಿದ ಶ್ರೀಗಳ ಭಾವಚಿತ್ರವನ್ನು ಹತ್ತಾಂತರಿಸಿದರು.ಈ ಸಂದರ್ಭದಲ್ಲಿ ಉಡುಪಿ ಮಾರುತಿ ವೀಥಿಕ ಗಣೇಶೋತ್ಸವದ ಪದಾಧಿಕಾರಿಗಳಾದ ರತ್ನಾಕರ ದೇವಾಡಿಗ ಕುತ್ಪಾಡಿ, ಗಣೇಶ್ ಕುಮಾರ್ ಮೂಡಬೆಟ್ಟು, ಉದ್ಯಮಿ ಸುಧೀರ್ ಶೇಟ್ ಉಡುಪಿ, ಸುಧೀರ್ ಶೆಟ್ಟಿ ಹಿರಿಯಡ್ಕ, ಅಧ್ಯಾಪಕರಾದ ಮನೋಹರ್ ಶೆಟ್ಟಿ, ವಿಶ್ವನಾಥ್ ಕಾಪು ಮೊದಲಾದವರು ಶ್ರೀಗಳನ್ನು ಭೇಟಿ ಮಾಡಿದರು. ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.