
ಉಡುಪಿ: ಆ.29ಕ್ಕೆ ಕಿದಿಯೂರು ಹೊಟೇಲಿನಲ್ಲಿ ಜಿ ಎಸ್ ಟಿ ಸೊಲ್ಯೂಷನ್ಸ್ ಕಾರ್ಯಕ್ರಮ
ಉಡುಪಿ: ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಪ್ರಮುಖ ಕಾರಣ ಕರ್ತರುಗಳಾದ ಉಡುಪಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಯ ನೇತೃತ್ವದಲ್ಲಿ ಉಡುಪಿ ಟ್ಯಾಕ್ಸ್ ಬಾರ್ ಅಸೋಸಿಯೇಶನ್, ದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟ್ಸ್ ಆಫ್ ಇಂಡಿಯಾ ಉಡುಪಿ ಬ್ರಾಂಚ್ (ಎಸ್ ಐ ರ್ ಸಿ),ಉಡುಪಿ ಜಿಲ್ಲಾ ಬೇಕರಿ ಹಾಗೂ ಖಾದ್ಯ ತಿನಸುಗಳ ತಯಾರಕರು ಮತ್ತು ಮಾರಾಟಗಾರರ ಸಂಘ, ಉಡುಪಿ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್, ಉಡುಪಿ ಡಿಸ್ಟಿಕ್ಟ್ ಕನ್ವೆನ್ಷನ್ ಹಾಲ್ ಅಸೋಸಿಯೇಶನ್, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್ಸ್,ಉಡುಪಿ, ಉಡುಪಿ ಹೋಟೆಲ್ ಓನರ್ಸ್ ಅಸೋಸಿಯೇಶನ್ , ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಒಟ್ಟಾಗಿ ಪ್ರಾಯೋಜಿಸುತ್ತಿರುವ ಕಾರ್ಯಕ್ರಮ
ಇದೇ ಬರುವ 29-8-2025 ರಂದು 3 ಗಂಟೆಯಿಂದ 6 ಗಂಟೆಯವರಗೆ ಕಿದಿಯೂರ್ ಹೋಟೆಲ್ ನ ಅನಂತ ಶಯನ ಹಾಲ್ ನಲ್ಲಿ ಜಿ ಎಸ್ ಟಿ ಸೊಲ್ಯೂಷನ್ಸ್ G S T solutions ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆಗೆ ಸಂಬಂಧಪಟ್ಟ ನೇರ ಪ್ರಶೆಗಳನ್ನು ಇಲಾಖೆಯ ಅಧಿಕಾರಿಗಳಿಗೆ ಕೇಳಿ ಉತ್ತರ ಪಡೆಯುವ ಹಾಗೂ ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಪರಿಹಾರವಾಗಬಲ್ಲ ವಿಚಾರಗಳ ಮನವಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವ ಅವಕಾಶ ಇದೆ.ಈ ಕಾರ್ಯಕ್ರಮದಲ್ಲಿ ತಜ್ಞರ ಸಮಿತಿಯಲ್ಲಿ ಹೊಳೆಯಪ್ಪ ಡೆಪ್ಯುಟಿ ಕಮಿಷನರ್, ಉಡುಪಿ, ಹೇಮಲತ ಡೆಪ್ಯುಟಿ ಕಮಿಷನರ್ ಮಂಗಳೂರು,ಡಿಪಾರ್ಟಮೆಂಟ್ ಆಫ್ ಕಮರ್ಷಿಯಲ್ ಟ್ಯಾಕ್ಸ್, ಉಡುಪಿ ಟ್ಯಾಕ್ಸ್ ಬಾರ್ ಅಸೋಸಿಯೇಶನ್ ನ ಅಧ್ಯಕ್ಷರಾದ Rtn ಬಿ ಎಂ ಭಟ್, ಉಡುಪಿ ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಕಾರ್ಯದರ್ಶಿ ಹಾಗೂ ಖ್ಯಾತ ಆಡಿಟರ್ ಆದ ಸಿಎ ಸುರೇಂದ್ರ ನಾಯಕ್, ಖ್ಯಾತ ಟ್ಯಾಕ್ಸ್ ಕನ್ಸಲ್ಟೆಂಟ್ ಪ್ರಸಾದ್ ಉಪಾಧ್ಯಾಯ, ಖ್ಯಾತ ಆಡಿಟರ್ ಆದ ಸಿಎ ಗಣೇಶ್ ವೈ , ಸಭಾಪತಿಗಳಾಗಿ ಕುಮಾರ ವಿ Jt ಕಮಿಷನರ್, ಲಕ್ಷಾಪತಿ ನಾಯ್ಕ್, Jt ಕಮಿಷನರ್, ಡಿಪಾರ್ಟಮೆಂಟ್ ಆಫ್ ಕಮರ್ಷಿಯಲ್ ಟ್ಯಾಕ್ಸ್, ಮಂಗಳೂರು ವಿಭಾಗ ಹಾಗೂ ಅಮ್ಮುಂಜೆ ಪ್ರಭಾಕರ್ ನಾಯಕ್, ಅಧ್ಯಕ್ಷರು ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಇವರು, ಜೊತೆಗೆ ಎಲ್ಲಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಆಸಕ್ತ ವಾಣಿಜ್ಯ ಸಂಸ್ಥೆಗಳ ಮಾಲಕರು ಮತ್ತು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರು, ಸದಸ್ಯರು ಭಾಗವಹಿಸುತ್ತಾರೆ . ಎಲ್ಲದಕ್ಕಿಂತ ಮಿಗಿಲಾಗಿ ಇಷ್ಟು ಸಂಖ್ಯೆಯಲ್ಲಿ ಸಂಘ ಸಂಸ್ಥೆಗಳು ಜೊತೆಯಾಗಿ ಪ್ರಾಯೋಜಿಸುತ್ತಿರುವುದು ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಬಹುತೇಕ ಅಧಿಕಾರಿಗಳು ಭಾಗವಹಿಸುತ್ತಿರುವುದು, ಸರಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರ ಅಂತರ ಕಡಿಮೆ ಮಾಡುವ ಪ್ರಮುಖ ಉದ್ದೇಶದ ಈ ತರಹದ ಕಾರ್ಯಕ್ರಮ ಉಡುಪಿ ಜಿಲ್ಲೆಯಲ್ಲೇ ಪ್ರಪ್ರಥಮಬಾರಿಗೆ ಆಯೋಜಿಸಲಾಗಿದೆ ಎಂದು ಈ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಯ ಗೌರವ ಕಾರ್ಯದರ್ಶಿ ಡಾll ವಿಜಯೇಂದ್ರ ವಸಂತ್ ತಿಳಿಸಿದ್ದಾರೆ.