ಎಣ್ಣೆಹೊಳೆ ಮೂಲದ ಹೊಟೇಲ್ ಉದ್ಯಮಿ ಸಂತೋಷ್ ಶೆಟ್ಟಿ ಬರ್ಬರ ಕೊಲೆ

ಎಣ್ಣೆಹೊಳೆ ಮೂಲದ ಹೊಟೇಲ್ ಉದ್ಯಮಿ ಸಂತೋಷ್ ಶೆಟ್ಟಿ ಬರ್ಬರ ಕೊಲೆ

 


ಕಾರ್ಕಳ: ಹೊಟೇಲ್ ಸಿಬ್ಬಂದಿಯೊಬ್ಬ ಕೆಲಸದ ವಿಚಾರದಲ್ಲಿ ಗದರಿದ ಹೊಟೇಲ್ ಮಾಲೀಕನನ್ನೇ ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ನಿವಾಸಿ ಹೊಟೇಲ್ ಉದ್ಯಮಿ ಸಂತೋಷ್ ಶೆಟ್ಟಿ(46) ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶ ಮೂಲದ ವೆಯ್ಟರ್ ಹೊಟೇಲ್ ನಲ್ಲಿ ಕೆಲಸದ ಸಮಯದಲ್ಲಿ ಮದ್ಯಪಾನ ಮಾಡಿರುವುದಕ್ಕೆ ಬೈದು ಬುದ್ಧಿವಾದ ಹೇಳಿದ್ದಕ್ಕೆ ಸಿಟ್ಟಿಗೆದ್ದ ಆತ ಕಿಚನ್'ನಿಂದ ಕತ್ತಿ ಹಿಡಿದುಕೊಂಡು ಬಂದು ಸಂತೋಷ್‌ ಶೆಟ್ಟಿಯವರು ಕುಳಿತ್ತಿದ್ದ ವೇಳೆ ಹಿಂಬದಿಯಿಂದ ಕುತ್ತಿಗೆಗೆ ಕಡಿದು ಹತ್ಯೆ ಮಾಡಿದ್ದಾನೆ.ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಭೀಕರ ಹತ್ಯೆಯಿಂದ ಪೂನಾದ ಹೊಟೇಲ್ ಉದ್ಯಮಿಗಳು ಬೆಚ್ಚಿಬಿದ್ದಿದ್ದು ಘಟನಾ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದರು.

ಮೃತ ಸಂತೋಷ್‌ ಶೆಟ್ಟಿ ಶವವನ್ನು ಹುಟ್ಟೂರು ಎಣ್ಣೆಹೊಳೆಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article