ಉಡುಪಿ: ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ರಾಜ್ಯಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ರಾಜ್ಯಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

 


ಉಡುಪಿ:"ಮಹಿಳಾ ಭದ್ರತೆಯೇ ಸ್ವಾತಂತ್ರ್ಯದ ಅಳತೆಗೋಲು" ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ  ಆಚರಿಸಲಾಯಿತು.  ಧ್ವಜಾರೋಹಣ ,  ಸಭಾ ಕಾರ್ಯಕ್ರಮ,ಮಕ್ಕಳ ಆಟೋಟ ಸ್ಪರ್ಧೆ,  ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಮಾಹಿತಿ ನೀಡುವುದು,  ಮಹಿಳೆಯರಿಗೆ ಮನರಂಜನಾ ಕಾರ್ಯಕ್ರಮ ಹೀಗೆ ವಿವಿಧ ಕಾರ್ಯಕ್ರಮಗಳ ಆಯೋಜಿಸಲಾಗಿತ್ತು .

ಮಹಿಳಾ ಪೌರಕಾರ್ಮಿಕರನ್ನು  ಗೌರವಿಸಿ,ಸನ್ಮಾನಿಸಿದ್ದು  ಕಾರ್ಯಕ್ರಮದ  ಮೆರುಗನ್ನು ಹೆಚ್ಚಿಸಿದ್ದಲ್ಲದೆ ಸ್ವಾತಂತ್ರ್ಯೋತ್ಸವದ ಸಾರ್ಥಕತೆಯನ್ನು ಸಾರುವಂತಿತ್ತು.ವಿವಿಧ  ಸಂಘಟನೆಗಳ ಮಹಿಳಾ ಮುಖಂಡರು,ಸಾಮಾಜಿಕ ಕಾರ್ಯಕರ್ತೆಯರು ,ವೃತ್ತಿಪರ ಹೋರಾಟಗಾರ್ತಿಯರು ಹಾಗೂ ವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಜ್ಯ, ಜಿಲ್ಲಾ, ಅಸೆಂಬ್ಲಿ ಮಟ್ಟದ ನಾಯಕಿಯರು ಪಾಲ್ಗೊಂಡಿದ್ದರು.

Ads on article

Advertise in articles 1

advertising articles 2

Advertise under the article