
ಹಾವಂಜೆಯಲ್ಲಿ ಮದರಸಾಗೆ ನಿಯಮಬಾಹಿರ ಅನುಮತಿ ಆರೋಪ- ಹಿಂದೂ ಸಂಘಟನೆಗಳ ವಿರೋಧ
ಉಡುಪಿ: ಹಾವಂಜೆ ಪಂಚಾಯತ್ ವ್ಯಾಪ್ತಿಯಲ್ಲಿ ಮದರಸಕ್ಕೆ ಅನುಮತಿ ನೀಡಿದ ವಿಚಾರವಾಗಿ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.ಬ್ರಹ್ಮಾವರ ತಾಲೂಕಿನ ಹಾವಂಜೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯವೊಂದನ್ನು ಕೈಗೊಳ್ಳಲಾಗಿತ್ತು.ಆದರೆ ಆ ನಿರ್ಣಯವನ್ನು ಪಿಡಿಒ, ಕಾರ್ಯದರ್ಶಿ ಧಿಕ್ಕರಿಸಿ ಮದರಸಾಕ್ಜೆ ಅನುಮತಿ ನೀಡಿದ್ದಾರೆ ಎಂಬುದೇ ಈ ವಿವಾದ.
ಗ್ರಾಮ ಪಂಚಾಯತ್ ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ಯಶ್ ಪಾಲ್ ಸುವರ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇದೇವೇಳೆ ಪಂಚಾಯತ್ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡು ಪರವಾನಿಗೆ ರದ್ದುಪಡಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ,ಕಾನೂನು ಮೀರಿ ಹೈಕೋರ್ಟ್ ಸುತ್ತೋಲೆಯನ್ನು ಪಿಡಿಒಗಳು ಧಿಕ್ಕರಿಸಿದ್ದಾರೆ.ಹಿಂದಿನ ಪಿಡಿಒ ಮತ್ತು ಹೊಸ ಪಿಡಿಒ ತರಾತುರಿಯಲ್ಲಿ ಮದರಸಾಕ್ಕೆ ಪರವಾನಿಗೆ ಕೊಟ್ಟಿದಾರೆ. ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಪರವಾನಿಗೆ ನೀಡಬಾರದು ಎಂದು ನಿರ್ಣಯಿಸಲಾಗಿತ್ತು.ಆದರೆ ಪಂಚಾಯತ್ ರಾಜ್ ಕಾನೂನಿಗೆ ವಿರುದ್ಧವಾಗಿ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ.ಅಧಿಕಾರಿಗಳ ಮೂಲಕ ಇಸ್ಲಾಮೀಕರಣ ಜಾರಿಗೆ ತರಲು ಹೊರಟಿದ್ದಾರೆ.ಮುಸಲ್ಮಾನರ ಒಂಭತ್ತು ಮನೆಗಳಿಗೆ ಮದರಸಾದ ಅಗತ್ಯ ಇಲ್ಲ.ನಕಲಿ ದಾಖಲೆ ಸೃಷ್ಟಿಸಿ ರಸ್ತೆಯಿಂದ 10 ಮೀಟರ್ ದೂರದಲ್ಲಿದೆ ಎಂದು ತೋರಿಸಲಾಗಿದೆ.ಕಾಂಗ್ರೆಸ್ ನ ಏಜೆಂಟರಂತೆ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.ತಕ್ಷಣ ಅನುಮತಿ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.