
ಉಡುಪಿ: AKMS ಸೈಫ್ ಕೊ*ಲೆ ಪ್ರಕರಣ- ಕುಕ್ಕಿಕಟ್ಟೆಯ ನಿವಾಸಿ ಫೈಜಲ್ ಖಾನ್ ಮತ್ತು ದೊಡ್ಡಣಗುಡ್ಡೆ ನಿವಾಸಿ ಶರೀಪ್ ಮತ್ತಿತರರಿಂದ ಕೃತ್ಯ - ಪೊಲೀಸ್ ಮಾಹಿತಿ
ಉಡುಪಿ: AKMS ಬಸ್ ಗಳ ಮಾಲಕ ಸೈಯಿಪುದ್ದಿನ್ ( 52) ಅಲಿಯಾಸ್ ಸೈಫ್ ನನ್ನು ಕುಕ್ಕಿಕಟ್ಟೆಯ ನಿವಾಸಿ ಫೈಜಲ್ ಖಾನ್ ಮತ್ತು ದೊಡ್ಡಣಗುಡ್ಡೆ ನಿವಾಸಿ ಶರೀಪ್ ಇವರು ಇಂದು ಬೆಳಿಗ್ಗೆ ಬಸ್ಸಿನ ವ್ಯವಹಾರದ ಕುರಿತು ಮಾತನಾಡಲು ಮಂಗಳೂರಿಗೆ ಹೋಗಲು ಇದೆ ಎಂದು ಹೇಳಿ ಮಣಿಪಾಲದ ಸೈಫ್ ಮನೆಗೆ ಬಂದಿದ್ದಾರೆ. ಮಣಿಪಾಲದ ಮನೆಯಿಂದ ಸ್ನೇಹಿತ ಫೈಜಲ್ ಖಾನ್ ಮತ್ತು ಶರೀಫ್ ಕಾರಿನಲ್ಲಿ ಮಲ್ಪೆಗೆ ಕರೆದುಕೊಂಡು ಹೋಗಿ , ಬೆಳಿಗ್ಗೆ 10:15 ಗಂಟೆಯಿಂದ 11:30 ಗಂಟೆ ನಡುವಿನ ಸಮಯದಲ್ಲಿ ಕೊಡವೂರು ಗ್ರಾಮದ ನಾಗಬನದ ಬಳಿ ಇತರರೊಂದಿಗೆ ಸೇರಿಕೊಂಡು ಮಚ್ಚಿನಿಂದ ತಲೆಗೆ ಮತ್ತು ಬೆನ್ನಿಗೆ ಕೊಚ್ಚಿ ಕೊಲೆ ಮಾಡಿ, ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸೈಪುದ್ದೀನ್ ಮಗ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 108/2025 ಕಲಂ : 103 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯ ಬಗ್ಗೆ ಮೂರು ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿರುತ್ತದೆ.
ಮೃತ ಸೈಪುದ್ದಿನ್ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.