
ಉಡುಪಿ: ಆಟಿಸಂ ಮಕ್ಕಳ ಪೋಷಕರ ಸ್ವಸಹಾಯ ಗುಂಪು - ಸಂವೇದದ ಪೋಷಕರಿಗೆ ೧೪ನೇ ಮಾಸಿಕ ಸಭೆ
27/09/2025 10:55 AM
ಉಡುಪಿ: ಆಟಿಸಂ ಸೊಸೈಟಿ ಆಫ್ ಉಡುಪಿ, ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟಿಸಂ ಮಕ್ಕಳ ಪೋಷಕರ ಸ್ವಸಹಾಯ ಗುಂಪು - ಸಂವೇದದ ಪೋಷಕರಿಗೆ ೧೪ನೇ ಮಾಸಿಕ ಸಭೆ ನಡೆಯಿತು. ಉಡುಪಿಯ ಶಾಲಾ ಪೂರ್ವ ತಯಾರಿ ಕೇಂದ್ರದ ಮೇಲ್ವಿಚಾರಕರಾದ ಕು. ದೀಕ್ಷಿತ ಅವರು ನಿಧಾನಗತಿಯ ಮಕ್ಕಳ ಬೆಳವಣಿಗೆಯಲ್ಲಿ ಫಿಸಿಯೋಥೆರಪಿ ಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಯುಕೆಯಲ್ಲಿಮಕ್ಕಳ ಬೆಳವಣಿಗೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಧರ್ಮಶೇಖರ್ ಪಾಟೀಲ್ ಅವರು ಆಟಿಸಂ ಪಾಲನೆಯ ಸಂಶೋಧನೆಗಳ ಕುರಿತು ಮಾಹಿತಿ ನೀಡಿದರು. ಆಟಿಸಂ ಸೊಸೈಟಿ ಆಫ್ ಉಡುಪಿ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ, ಸಂವೇದ ಗುಂಪಿನ ಅಧ್ಯಕ್ಷ ವಿಠ್ಠಲ ಭಕ್ತ, ಪ್ರೋಗ್ರಾಂ ಮೇನೇಜರ್ ಕೀರ್ತೇಶ್ ಉಪಸ್ಥಿತರಿದ್ದರು.