ಉಡುಪಿ: ನಮ್ಮ 8 ಬೇಡಿಕೆ ಈಡೇರಿಸಿದರೆ ಮಾತ್ರ ಗಣತಿಯಲ್ಲಿ ಭಾಗಿಯಾಗ್ತೇವೆ - ಜಿಲ್ಲೆಯಲ್ಲಿ ಪ್ರಾರಂಭಗೊಳ್ಳದ ಸಾಮಾಜಿಕ-ಶೈಕ್ಷಣಿಕ ಗಣತಿ ಕಾರ್ಯ !

ಉಡುಪಿ: ನಮ್ಮ 8 ಬೇಡಿಕೆ ಈಡೇರಿಸಿದರೆ ಮಾತ್ರ ಗಣತಿಯಲ್ಲಿ ಭಾಗಿಯಾಗ್ತೇವೆ - ಜಿಲ್ಲೆಯಲ್ಲಿ ಪ್ರಾರಂಭಗೊಳ್ಳದ ಸಾಮಾಜಿಕ-ಶೈಕ್ಷಣಿಕ ಗಣತಿ ಕಾರ್ಯ !

 


ಉಡುಪಿ: ರಾಜ್ಯ ಹಿಂದುಳಿದ ವರ್ಗಗಳ ಅಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಇಂದು ರಾಜ್ಯಾದ್ಯಂತ ಪ್ರಾರಂಭಿಸಿದರೂ ,ಉಡುಪಿಯಲ್ಲಿ ಇಂದು ಗಣತಿ ನಡೆಯುತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಕರೊಬ್ಬರು , ಸರ್ಕಾರದ ಅವೈಜ್ಞಾನಿಕ ಕ್ರಮವನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ. ನಾವು 8 ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಿದ್ದೇವೆ. ಬೇಡಿಕೆ ಈಡೇರಿಸದ ಹೊರತು ಗಣತಿ ಕಾರ್ಯದಲ್ಲಿ ಭಾಗವಹಿಸುವುದಿಲ್ಲ.ಮುಖ್ಯವಾಗಿ ಗಣತಿಗೆ ಶಿಕ್ಷಕರ ಕೊರತೆ ಇದೆ.ಜಿಲ್ಲೆಯಲ್ಲಿ ಮೂರು ಸಾವಿರ ಗಣತಿದಾರರ ಅಗತ್ಯವಿದೆ.ಹೀಗಾಗಿ ಎಲ್ಲಾ ಸರ್ಕಾರಿ ಇಲಾಖೆ ನೌಕರರನ್ನು ಬಳಸಿಕೊಳ್ಳಬೇಕು.ನಮಗೂ ಕೂಡ ದಸರಾ ರಜೆ ಬೇಕು ,ನವರಾತ್ರಿಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದಾರೆ. ಇದಲ್ಲದೆ ಗಣತಿ ಕಾರ್ಯಕ್ಕೆ ನಿವೃತ್ತಿ ಅಂಚಿನಲ್ಲಿರುವವರನ್ನು ಬಳಸಿರುವುದಕ್ಕೆ ನಮ್ಮ ವಿರೋಧವಿದೆ.ವಿಕಲಚೇತನರು , ಗರ್ಭಿಣಿಯರಿಗೂ ಸರಕಾರ ವಿನಾಯಿತಿ ನೀಡಿಲ್ಲ.ಈ ರೀತಿಯ ನೂರು ಶಿಕ್ಷಕರು ಇದ್ದಾರೆ, ಅವರನ್ನು ಕೈಬಿಡಬೇಕು.ಏಪ್ರಿಲ್ ನಲ್ಲಿ ಮಾಡಿದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಗಣತಿಯ ಗೌರವ ಧನ ಇನ್ನೂ ಸಿಕ್ಕಿಲ್ಲ.ಶಿಕ್ಷಕರಿಗೆ ಅನುಕೂಲವಾಗುವಂತೆ ಶಾಲೆಯ ಆಸುಪಾಸಿನಲ್ಲೇ ಗಣತಿಗೆ ಸೂಚಿಸಬೇಕು.ಶ್ರೇಷ್ಠ ದರ್ಜೆಯ app ಬಳಸಬೇಕು, ಇಲ್ಲವಾದರೆ ತೊಂದರೆಯಾಗುತ್ತದೆ.ಗಣತಿ ಮುಗಿದ ತಕ್ಷಣ ಗೌರವ ಧನ ನೀಡಬೇಕು.ಇನ್ನು 15 ದಿನಗಳಲ್ಲಿ 150 ಮನೆ ನಿರ್ವಹಿಸಲು ಆಗುವುದಿಲ್ಲ.ಪ್ರತಿ ಶಿಕ್ಷಕರಿಗೆ 75 ಮನೆ ಸೀಮಿತಗೊಳಿಸಬೇಕು.ಈಗಾಗಲೇ ಬಿ ಎಲ್ ಒ ಕಾರ್ಯಕ್ಕೆ ನಿಯೋಜಿಸಿದ ಶಿಕ್ಷಕರನ್ನು ಗಣತಿಯಿಂದ ಹೊರತುಪಡಿಸಬೇಕು ಎಂದಿರುವ ಶಿಕ್ಷಕ ,ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಗಣತಿಯಲ್ಲಿ ಭಾಗವಹಿಸುವುದಿಲ್ಲ ಎಂದು ಶಿಕ್ಷಕರಾದ ಸಂತೋಷ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ಹೇಳಿದ್ದಾರೆ.


Ads on article

Advertise in articles 1

advertising articles 2

Advertise under the article