
ಉಡುಪಿ:18 ಕ್ರಿಮಿನಲ್ ಪ್ರಕರಣಗಳ ರೌಡಿ ಶೀಟರ್ AKMS ಸೈಫ್ ಮನೆಯೊಳಗೇ ಉದ್ಯೋಗಿಗಳಿಂದ ಹತ್ಯೆ !
ಉಡುಪಿಯ ಕೊಡವೂರು ಸಾಲ್ಮರದಲ್ಲಿ ರೌಡಿಶೀಟರ್ ,ಬಸ್ ಗಳ ಮಾಲಕ ಸೈಫುದ್ದೀನ್ ಕೊಲೆ ಸಂಬಂಧ ಮಾತನಾಡಿರುವ ಉಡುಪಿ ಎಸ್ ಪಿ ಹರಿರಾಮ್ ಶಂಕರ್ ,ಮೂವರು ಕೃತ್ಯ ಎಸಗಿರುವ ಶಂಕೆ ಇದೆ.ಬೆಳಗಿನ ಜಾವ 10ರಿಂದ 11 ಗಂಟೆಯ ನಡುವೆ ದುಷ್ಕೃತ್ಯ ನಡೆದಿದೆ .ಸೈಫ್ ಮೇಲೆ 18 ಕ್ರಿಮಿನಲ್ ಕೇಸುಗಳಿವೆ.
ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ ಎಂದು ಹೇಳಿದ್ದಾರೆ. ಸೈಫ್ ಎರಡು ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.ಇಂದು ಮೂರು ಜನ ಆರೋಪಿಗಳು ಏಕಕಾಲದಲ್ಲಿ ಅಟ್ಯಾಕ್ ಮಾಡಿದ್ದಾರೆ.ಆರೋಪಿಗಳು ಸೈಫ್ ನ AKMS ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದಾರೆ. ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.ಕೊಲೆಗೆ ನಿಖರ ಕಾರಣ ತನಿಖೆಯಿಂದ ಬಹಿರಂಗವಾಗುತ್ತದೆ.ಚಾಕು ಮತ್ತು ತಲವಾರ್ ನಿಂದ ದಾಳಿ ಮಾಡಿದ್ದಾರೆ.ಸೊಕೋ ಟೀಮ್ ಇನ್ನಷ್ಟೇ ಸ್ಥಳಕ್ಕೆ ಬರಬೇಕಾಗಿದೆ. ದೇಹದ ಹಲವೆಡೆ ಇರಿದ ಗಾಯಗಳಿವೆ.ಮಲ್ಪೆಯ ಮನೆಯಲ್ಲಿ ಒಬ್ಬರೇ ಇದ್ದಾಗ ಅಟ್ಯಾಕ್ ಆಗಿದೆ.ಈ ಹಿಂದಿನ ಕೊಲೆಗಳಿಗೆ ಪ್ರತಿಕಾರದ ಕೃತ್ಯವಾ ಎಂಬುದು ತನಿಖೆಯಿಂದ ಗೊತ್ತಾಗಬೇಕಾಗಿದೆ ಎಂದು ಹೇಳಿದ್ದಾರೆ.