
ಮೈಸೂರು: ಮಕ್ಕಳು ಅಂತ್ಯಕ್ರಿಯೆ ನಡೆಸುವಂತಿಲ್ಲ : ಎಸ್. ಎಲ್. ಭೈರಪ್ಪ ವಿಲ್ ನೋಡಿ ಕುಟುಂಬ ತಬ್ಬಿಬ್ಬು !
25/09/2025 03:07 PM
ಮೈಸೂರು: ನಾಡಿನ ಹಿರಿಯ ಸಾಹಿತಿ, ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರು ನಿಧನರಾಗಿದ್ದಾರೆ. 94 ವರ್ಷದ ಭೈರಪ್ಪ ಅವರು ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ರಾಜಾಜಿನಗರದ ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ಅವರು ನಿನ್ನೆ ಕೊನೆಯುಸಿರೆಳೆದಿದ್ದರು. ಇವರ ನಿಧನವು ನಾಡಿನ ಸಾಹಿತ್ಯ ಪ್ರೇಮಿಗಳಿಗೆ ದೊಡ್ಡ ನಷ್ಟವಾಗಿದೆ.
ಶುಕ್ರವಾರ ಎಸ್. ಎಲ್. ಭೈರಪ್ಪ ಅವರ ಅಂತ್ಯಕ್ರಿಯೆ ನಡೆಯಲಿದ್ದು, ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳಾದ ಉದಯ ಶಂಕರ್ ಮತ್ತು ರವಿಶಂಕರ್ ನಡೆಸಬಾರದು ಎಂದು ಭೈರಪ್ಪ ವಿಲ್ ಬರೆದಿದ್ದಾರೆ. ಈ ವಿಲ್ ಅನ್ನು ಅವರ ಅಭಿಮಾನಿ ಫಣೀಶ್ ಪ್ರದರ್ಶಿಸಿದ್ದು, ಕೆಲವು ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.ನಾಳೆ ಅಂತ್ಯಕ್ರಿಯೆ ಸರಕಾರಿ ಗೌರವಗಳೊಂದಿಗೆ ನಡೆಯಲಿದ್ದು ಈ ವಿಲ್ ವಿಚಾರವಾಗಿ ನಾಳೆ ಸ್ಪಷ್ಟತೆ ಸಿಗಬಹುದು.