ಉಡುಪಿ: ಆಟಿಡೊಂಜಿ ವಿಪ್ರಕೂಟ

ಉಡುಪಿ: ಆಟಿಡೊಂಜಿ ವಿಪ್ರಕೂಟ

 


ಉಡುಪಿ: ತಾಲೂಕು ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ  ಉಡುಪಿ ಕನ್ನರ್ಪಾಡಿಯ ಶ್ರೀದೇವಿ ಸಭಾ ಭವನದಲ್ಲಿ " ಆಟಿಡೊಂಜಿ ವಿಪ್ರಕೂಟ " ಕಾರ್ಯಕ್ರಮ ನಡೆಯಿತು.

ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣದಿಂದ ಆರಂಭವಾಗಿ ಸಭಾ ಕಾರ್ಯಕ್ರಮದಲ್ಲಿ -  ಸಂಘಟನೆ ಮತ್ತು ಆಟಿ ಮಾಸದ ಬಗ್ಗೆ ವಿಶೇಷ ಮಾಹಿತಿಯನ್ನು ವಿದ್ವಾನ್ ಹೆರ್ಗ ಹರಿದಾಸ ಭಟ್ ರವರು ನೀಡಿದರು.

ಮುಖ್ಯ ಅತಿಥಿಗಳಾಗಿ  ಶರತ್ ಕೆ ರಾವ್ -ಮಾಹೆ, ಉಡುಪಿಯ ನಿಕಟಪೂರ್ವ  ಶಾಸಕ ಕೆ ರಘುಪತಿ ಭಟ್, ಶ್ರೀದೇವಿ ಸಭಾಭವನದ ಮಾಲಕ ರಮೇಶ್ ಬೀಡು, ನಗರಸಭಾ ಸದಸ್ಯ ಕೃಷ್ಣರಾವ್ ಕೊಡಂಚ, ಹಾಗೂ ಖ್ಯಾತ ಚಲನಚಿತ್ರ ನಟಿ , ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ  ಶ್ರೀಕಾಂತ್ ಉಪಾಧ್ಯ ಕೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಿತು . ಪ್ರಧಾನ ಕಾರ್ಯದರ್ಶಿಗಳಾದ ಕೆ. ದುರ್ಗಾಪ್ರಸಾದ್ ಭಾರ್ಗವ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಿದವರಿಗೆ, ವಿವಿಧ ಕಾರ್ಯ ಕ್ಷೇತ್ರದಲ್ಲಿ ಸಾಧನೆಗೈದ ಹಲವಾರು ಸಾಧಕರನ್ನು ಅಭಿನಂದಿಸಲಾಯಿತು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಆಟಿ ಮಾಸದ ವಿಶೇಷ ಖಾದ್ಯಗಳ ಸಹ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಉಡುಪಿ ತಾಲೂಕಿನ ಸುಮಾರು 26 ವಿಪ್ರ ವಲಯಗಳು ಮತ್ತು 7 ವಿವಿಧ ಬ್ರಾಹ್ಮಣ ಸಂಘ ಗಳ ಸುಮಾರು ಒಂದು ಸಾವಿರ ಜನರು ಸೇರಿದ್ದರು. ಕೋಶಾಧಿಕಾರಿ ಹಯವದನ ಭಟ್ ಧನ್ಯವಾದವಿತ್ತರು.

Ads on article

Advertise in articles 1

advertising articles 2

Advertise under the article